Home ಅಪರಾಧ ಲೋಕ ತೆಂಕಕಾರಂದೂರಿನಲ್ಲಿ‌ ಮದ್ಯರಾತ್ರಿ ಎರಡು ಮನೆಗಳಲ್ಲಿ ಕಳ್ಳತನ

ತೆಂಕಕಾರಂದೂರಿನಲ್ಲಿ‌ ಮದ್ಯರಾತ್ರಿ ಎರಡು ಮನೆಗಳಲ್ಲಿ ಕಳ್ಳತನ

0

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ಮೇ 22 ರಂದು ಮಧ್ಯ ರಾತ್ರಿ ಬಳಿಕ ಎರಡು ಮನೆಗಳಿಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ.

ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಎಂಬವರ ಮನೆಯಲ್ಲಿ ತಮ್ಮ ಮಗ ವೃದ್ಧೆ ತಾಯಿ ಜತೆ ಇರುವಾಗಲೇ ತಡರಾತ್ರಿ ಹಿಂಬದಿ ಬಾಗಿಲು ಒಡೆದು ರೂಮ್ ನಲ್ಲಿರುವ ಕಪಾಟು ಒಡೆದು ಸುಮಾರು 20 ಪವನ್ ಚಿನ್ನ ಇತರ ದಾಖಲೆಗಳ ಬ್ಯಾಗನ್ನೇ ಕದ್ದು ಪರಾರಿ ಯಾಗಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕದ್ದಿದ್ದು, ಮನೆಮಂದಿಗೆ ಎಚ್ಚರವಾಗಿರಲಿಲ್ಲ.

ಪ್ರೇಮಾ ಅವರ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿಯವರ ಮನೆಯಲ್ಲು ಕಳ್ಳತನ ನಡೆಸಲಾಗಿದೆ.

ಮನೆಯವರ ಸಂಬಂಧಿಕರ ಮನೆಯಲ್ಲಿ ಕೋಲ ಇರುವ ಕಾರಣ ಸಂಜೆ ತೆರಳಿದ್ದು ಮನೆಯ ಬಾಗಿಲು ಒಡೆದು 4 ಪವನ್ ಚಿನ್ನ ಕಳ್ಳತನ ಮಾಡಲಾಗಿದೆ
ಸ್ಥಳಕ್ಕೆ ವೇಣೂರು ಠಾಣೆ ಉಪನಿರೀಕ್ಷಕ ಶ್ರೀ ಶೈಲ ಹಾಗೂ ತಂಡ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version