ಬೆಳ್ತಂಗಡಿ; ಪತ್ನಿಯೊಂದಿಗೆ ಜಗಳಮಾಡಿಕೊಂಡು ಮನೆಯಿಂದ ಹೋದ ವ್ಯಕ್ತಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಪುತ್ತಿಲ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ (35)ಎಂಬಾತನೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.
ಈ ಬಗ್ಗೆ ಅವರ ಪತ್ನಿ ಝೊಹರಾ ಪೊಲೀಸರಿಗೆ ದೂರು ನೀಡಿದ್ದಾರೆ.
ಅಬ್ದುಲ್ ಹಮೀದ್ ಕೂಲಿ ಕಾರ್ಮಿಕರಾಗಿದ್ದು ಇವರು ಕೆಲಸಕ್ಕೆ ಹೋಗದೆ ಮನೆಗೆ ಖರ್ಚಿಗೆ ಹಣ ನೋಡದೆಇದ್ದು ಇದೇ ವಿಚಾರವಾಗಿ ಮೇ 15ರಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳಾಡಿದ್ದಾರೆ. ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಬಳಿಕ ಅವರ ಮೊಬೈಲ್ ಗೆ ಕರೆಮಾಡಿದಾಗ ತಾನು ಮನೆಗೆ ಬರುವುದಿಲ್ಲ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಅಲ್ಲದೆ ಹಮೀದ್ ಸಂಬಂಧಿಕರ ಮನೆಗೆ ಹೋಗಿ ತಾನು ಪತ್ನಿಯೊಂದಿಗೆ ಜಗಳ ಮಾಡಿ ಬಂದಿದ್ದೇನೆ ಎಲ್ಲಿಯಾದರೂ ಹೋಗುತ್ತೇನೆ ಸಾಯುತ್ತೇನೆ ಎಂದು ಹೇಳಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.