Home ಸ್ಥಳೀಯ ಸಮಾಚಾರ ನಮ್ಮ ಸಂಸ್ಕೃತಿಯನ್ನು ಉಳಿಸಿ – ಬೆಳೆಸೋಣ – ಸೋನಿಯಾ ಯಶೋವರ್ಮ.

ನಮ್ಮ ಸಂಸ್ಕೃತಿಯನ್ನು ಉಳಿಸಿ – ಬೆಳೆಸೋಣ – ಸೋನಿಯಾ ಯಶೋವರ್ಮ.

0

ಬೆಳ್ತಂಗಡಿ; ” ನಾವಿಂದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕಾಗಿದೆ. ಇಂದು ಪ್ರತಿ ಮನೆಯವರು ತಮ್ಮ ಮಕ್ಕಳಿಗೆ ಈ ರೀತಿಯ ಸಂಸ್ಕಾರವನ್ನು ಕಳಿಸಿದರೆ ಖಂಡಿತವಾಗಿಯೂ ನಮ್ಮ ಸಮಾಜದ ಯಾವುದೇ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ. ಅಂತಹ ಕಾರ್ಯವನ್ನು ನಾವೆಲ್ಲ ಜೊತೆ ಸೇರಿ ಮಾಡೋಣ. ಇನ್ನೊಂದು ಮುಖ್ಯ ವಿಚಾರವೆಂದರೆ ಇದೇ ತಿಂಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಮ್ಮ ಮಹಿಳಾ ಒಕ್ಕೂಟದ ವಿಶೇಷ ಸಮ್ಮೇಳನವು ನಡೆಯಲಿದೆ. ಈ ಸಮ್ಮೇಳನದಲ್ಲಿ ತಾವೆಲ್ಲರೂ ಪಾಲ್ಗೊಂಡು ತಮ್ಮ ಸಂಘಟನೆಯ ಬಲವನ್ನು ಇನ್ನಷ್ಟು ವೃದ್ಧಿಸಿಕೊಳ್ಳಿ ” ಎಂದು ಶ್ರೀಮತಿ ಸೋನಿಯಾ ಯಶೋವರ್ಮರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಶಾಂತಿಶ್ರೀ ಮಹಿಳಾ ಸಮಾಜ ಬೆಳ್ತಂಗಡಿಯ ವತಿಯಿಂದ ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಏರ್ಪಡಿಸಲಾದ ಯಕ್ಷಗಾನ ಶೈಲಿಯ ಕಾವ್ಯವಾಚನ- ಪ್ರವಚನ ವೈಭವದ ಶ್ರೀಜಿನ ಶಾಂತಿನಾಥ ಚರಿತೆ ಎಂಬ ಕಾರ್ಯಕ್ರಮವನ್ನು ಮೇ 19 ರಂದು ಉದ್ಘಾಟಿಸಿ ಮಾತನಾಡಿದರು.
ಆರಂಭದಲ್ಲಿ ಶಾಂತಿಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ತ್ರಿಶಲಾ ಜೈನ್ ಕೆ ಎಸ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮದ ಮಹತ್ವವನ್ನು ವ್ಯಕ್ತಪಡಿಸಿದರು. ಆ ಬಳಿಕ ಕಾವ್ಯಶ್ರೀ ಆಜೇರು ಇವರ ಹಾಡುಗಾರಿಕೆಯೊಂದಿಗೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾರ್ಕಳದ ಮುನಿರಾಜ ರೆಂಜಾಳ ಇವರ ಪ್ರವಚನ ಮೂಲಕ ಶ್ರೀಪತಿ ನಾಯಕ್ ಮತ್ತು ಚಂದ್ರಶೇಖರ್ ಅವರ ಸಹಕಾರದೊಂದಿಗೆ ಶ್ರೀಜಿನ ಶಾಂತಿನಾಥ ಚರಿತೆ ಎಂಬ ಕಥಾ ಭಾಗವನ್ನು ಅತ್ಯುತ್ತಮ ರೀತಿಯಲ್ಲಿ ವ್ಯಕ್ತಪಡಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮವನ್ನು ಸಂಘಟನೆಯ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಎಸ್ ಹೆಗ್ಡೆ ಸರ್ವರನ್ನು ಸ್ವಾಗತಿಸಿದರೆ, ಸಂಘಟನೆಯ ಕೋಶಾಧಿಕಾರಿ ಶ್ರೀಮತಿ ಅನುಪಮ ರವರು ಧನ್ಯವಾದ ಸಲ್ಲಿಸಿದರೆ, ಶ್ರೀಮತಿ ದವಳ ರವರು ಕಾರ್ಯಕ್ರಮ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version