
ಬೆಳ್ತಂಗಡಿ; ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ )ತೋಟತ್ತಾಡಿ, ಚಿಬಿದ್ರೆ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಮಾಜಿ ಶಾಸಕರು ಬಿಲ್ಲವ ಸಮಾಜದ ಮುಖಂಡರಾದ ಕೆ. ವಸಂತ ಬಂಗೇರ ಅವರಿಗೆ ನುಡಿ ನಮನ ಕಾರ್ಯಕ್ರಮ ಸಂಘದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ,ಚಿಬಿದ್ರೆ ಇದರ ಅಧ್ಯಕ್ಷರಾದ ಸನತ್ ಕುಮಾರ್ ಮೂರ್ಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ನೆರಿಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಂಗೇರರ ಆತ್ಮೀಯರು ಆದ ರಾಮ್ ಕುಮಾರ್ ಬೋವಿನಡಿ ಭಾಗವಹಿಸಿ, ಬಂಗೇರರ ಜೊತೆ ಸುಧೀರ್ಘ 45 ವರ್ಷ ಕಳೆದ ಗೆಳೆತನದ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಿದರು. ವೇದಿಕೆಯಲ್ಲಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾದ ಪ್ರೇಮ, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಸುಕೇಶ್ ಪೂಜಾರಿ ಪರಾರಿ, ಬಿಲ್ಲವ ಮುಖಂಡರಾದ ಓಬಯ್ಯ ಪೂಜಾರಿ ಅಂತರ, ಸೀತಾರಾಮ ಪೂಜಾರಿ ಕಜೆ,ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ಚಿಬಿದ್ರೆ, ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ನಿಶ್ಮಿತಾ, ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಧನಂಜಯ ಚಿಬಿದ್ರೆ, ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದ ಗುರುದೇವ ಪ್ರಥಮ ದರ್ಜೆಯ ಕಾಲೇಜ್ ಬೆಳ್ತಂಗಡಿ ಇದರ ಉಪನ್ಯಾಸಕ ಸತೀಶ್ ಚಿಬಿದ್ರೆ ಸ್ವಾಗತಿಸಿದರು, ಗುರುದೇವ ಕಾಲೇಜಿನ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಸ್ತೆಗೆ ಬಂಗೇರ ಹೆಸರಿಡಲು ನಿರ್ಣಯ : ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿ. ಹಿಂದೂ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ. ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬಂಗೇರ ಹೆಸರಿಡಲು ಇಂದು ನಡೆದ ಸಂಘದ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯಲ್ಲಿ ನಿರ್ಣಯಿಸಲಾಯಿತು.