ಬೆಳ್ತಂಗಡಿ; ವಕೀಲರ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ನಡೆಯಿತು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಅವರು ವಹಿಸಿ ಶುಭ ಹಾರೈಸಿದರು
ಮುಖ್ಯ ಅಥಿತಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ ಸಂದೇಶ್ ಕೆ ಜೆ ಅವರು ಭಾಗವಹಿಸಿ ಶುಭ ಹಾರೈಸಿದರು.
ಹಿರಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಹಿರಿಯ ವಕೀಲರ ಸಮಿತಿ ಅಧ್ಯಕ್ಷ
ಅಲೋಶಿಯಸ್ ಎಸ್ ಲೋಬೊ ವಕೀಲರ ಸಂಘದ ರಿ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ದೇವರಾಜು ಹೆಚ್.ಎಂ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ನವೀನ್ ಬಿ ಕೆ ಸ್ವಾಗತಿಸಿದರು. ಉಷಾ ಪ್ರಾರ್ಥಿಸಿದರು. ಪ್ರಶಾಂತ್ ಎಂ ವಂದಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘ ರಿ ಬೆಳ್ತಂಗಡಿ ಯ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ, ಖಜಾಂಚಿಯಾದ ಪ್ರಶಾಂತ್ ಎಂ, ಅಸ್ಮಾ, ಮತ್ತಿತರರು ಗಣ್ಯರನ್ನು ಸ್ವಾಗತಿಸಿದರು
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಇತರ ಪದಾಧಿಕಾರಿಗಳು, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.