Home ಸ್ಥಳೀಯ ಸಮಾಚಾರ ತಾಲೂಕಿನ ಹಿರಿಯ ರಾಜಕೀಯ ಮುಖಂಡ ತುಂಗಪ್ಪ ಗೌಡ ನಿಧನ

ತಾಲೂಕಿನ ಹಿರಿಯ ರಾಜಕೀಯ ಮುಖಂಡ ತುಂಗಪ್ಪ ಗೌಡ ನಿಧನ

259
0

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಹಿರಿಯ ರಾಜಕೀಯ ಮುಖಂಡ
ಜಿಪಂ ಮಾಜಿ ಸದಸ್ಯ, ಉಜಿರೆ ಗ್ರಾಮದ ನಿವಾಸಿ ಕೃಷಿಕ ತುಂಗಪ್ಪಗೌಡ (78) ಅಲ್ಪಕಾಲದ ಅಸೌಖ್ಯದಿಂದ ಮೇ 10ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ನಿರ್ದೇಶಕರಾಗಿ ಕಾಲಭೈರವೇಶ್ವರ ಸೊಸೈಟಿಯ ನಿರ್ದೇಶಕರಾಗಿ, ತಾಲೂಕು ಒಕ್ಕಲಿಗ ಗೌಡರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು
ಜನತಾಪಕ್ಷದ ಮೂಲಕ ರಾಜಕೀಯಕ್ಕೆ ಬಂದ ತುಂಗಪ್ಪ ಗೌಡ ಅವರು ಕೊನೆಯ ವರೆಗೂ ತಾನು ನಂಬಿದ ಸಿದ್ದಾಂತಕ್ಕೆ ಬದ್ದರಾಗಿಯೇ ರಾಜಕೀಯ ನಡೆಸಿದವರು.
ವಸಂತ ಬಂಗೇರರು ಜನತಾಪರಿವಾರದ ಪಕ್ಷಗಳಲ್ಲಿ ಇದ್ದಾಗ ಅವರ ಅತ್ಮೀಯ ವಲಯದಲ್ಲಿದ್ದ ತುಂಗಪ್ಪ ಗೌಡರು ಅತ್ಯತ್ತಮ ರಾಜಕೀಯ ಭಾಷಣಕಾರರಾಗಿದ್ದರು. ವಸಂತ ಬಂಗೇರರು ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿಯೂ ಅವರು ಬಂಗೇರರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬರದೆ ಜನತಾದಳದಲ್ಲಿಯೇ ಮುಂದುವರಿದಿದ್ದರು. ಜನತಾದಳ ಪಕ್ಷದ ಅಸ್ತಿತ್ವ ಉಳಿಸುವ ಪ್ರಯತ್ನ ನಡೆಸಿದ್ದರು.ಅವರಿಗೆ ಪತ್ನಿ,ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ

LEAVE A REPLY

Please enter your comment!
Please enter your name here