ದಾಂಡೇಲಿ: ಇಲ್ಲಿನ ಹಾಲಮಡ್ಡಿ ಸಮೀಪ
ಮೊಸಳೆಗಳಿರುವ, ಕಾಳಿನದಿ ಸೇರುವ ನಾಲೆಗೆ ತನ್ನ ಆರು ವರ್ಷದ ಮಗುವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಗುವಿನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
ವಿನೋದ (6) ಎಂಬ ಮಗುವನ್ನು ಆತನ ತಾಯಿ ಸಾವಿತ್ರಿ ಸಿಳಿನಿ ನಾಲೆಗೆ ಎಸೆದಿದ್ದರು.
‘ಪತಿ ರವಿಕುಮಾರ ಮತ್ತು ಸಾವಿತ್ರಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಪತಿಯ ಮೇಲಿನ ಕೋಪದಿಂದ ಮಗುವನ್ನು ಆಕೆ ನಾಲೆಗೆ ಎಸೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಲಾಟೆಯ ನಡುವೆ ಈಕೆ ನಾಲೆಗೆ ಮಗುವನ್ನು ಎಸೆದಿದ್ದು ಈಬಗ್ಗೆ ಹೇಳಿದ್ದಾಳೆ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿಶಾಮಕ ದಳದವರು ಸ್ಥಳೀಯರು ಸೇರಿ ಮಗುವಿಗಾಗಿ ತಡರಾತ್ರಿಯಿಂದಲೇ ಶೋಧ ಕಾರ್ಯ ನಡೆದಿತ್ತು. ಭಾನುವಾರ ಬೆಳಿಗ್ಗೆ ನಾಲೆಯ ಬಳಿ ಮಗುವಿನ ಮೃತದೇಹ ಪತ್ತೆಯಾಗಿದೆ.
