ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 21ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಗೊಂಡು ಬೆಳ್ತಂಗಡಿ ಗೆ ಆಗಮಿಸಿದ ಲಾಯಿಲದ ಗಣೇಶ್ ಬಿ.ಎಲ್ ಅವರಿಗೆ ಶನಿವಾರ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಬೆಳಿಗ್ಗೆ ಕುತ್ಯಾರು ದೇವಸ್ಥಾನದಿಂದ ತೆರೆದ ವಾಹನದಲ್ಲಿ ಗಣೇಶ್ ಬಿಎಲ್. ಅವರನ್ನು ಕರೆತರಲಾಯಿತು.
ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಅಭಿನಂದಬಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮರಾಠಿ ಸಂಘದ ಮುಖಂಡ ಉಮೇಶ್ ಕೇಳ್ತಡ್ಕದೇಶಸೇವೆ ಎನ್ನುವುದು ಸುಲಭವಾದ ಕೆಲಸವಲ್ಲ. ಅಲ್ಲಿ ತುಂಬಾ ತ್ಯಾಗ ಇರುತ್ತದೆ. ಅವರ ತ್ಯಾಗವನ್ನು ನಾವು ಗುರುತಿಸಿ ಗೌರವಿಸಬೇಕಾಗಿದೆ ಎಂದರು.
ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಮಾತನಾಡಿ ಅತ್ಯಂತ ಕಠಿನ ಪರಿಸ್ಥಿತಿಯಲ್ಲಿ 21ವರ್ಷಗಳ ಕಾಲ ದೇಶಕ್ಕಾಗಿ ಸೆವೆ ಸಲ್ಲಿಸಿದ ಗಣೇಶ್ ಅವರ ಸಾಧನೆ ತಾಲೂಕಿಗೆ ಹೆಮ್ಮೆ ತರುವಂತದ್ದಾಗಿದೆ ಎಂದು ಎಲ್ಲರ ಪರವಾಗಿ ಗಣೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ, ಬಳೆಂಜ ಗ್ರಾ.ಪಂ ಸದಸ್ಯ ರವೀಂದ್ರ ಅಮೀನ್, ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಲಾಯಿಲ ಗ್ರಾ.ಪಂ ಸದಸ್ಯ ಗಣೇಶ್, ಸುರೇಶ್ ಶೆಟ್ಟಿ, ಪ್ರಶಾಂತ್, ವಿನಯ ಕುಮಾರ್, ಶೇಖರ ಲಾಯಿಲ, ಮರಾಠಿ ಸಂಘದ ಪದಾಧಿಕಾರಿಗಳು ಮುಖಂಡರುಗಳು ಇದ್ದರು
ರವಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು,