ಬೆಳ್ತಂಗಡಿ: ಹಲವು ಸಮಯದಿಂದ ದೊಡ್ಡ ಕರಳು ಹಾಗೂ ಮೇದೋಜಿರಕ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ವಾಣಿ ಕಾಲೇಜಿನ ಉಪನ್ಯಾಸಕ ನಂದಕುಮಾರ್(40) ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುದುವೆಟ್ಟು ಗ್ರಾಮದ ಎಷ್ಟೋಡು ಶೇಖರ ಗೌಡರ ಪುತ್ರ ನಂದಕುಮಾರ್ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.ಅವರು ಪತ್ನಿ ದಿವ್ಯಾ ನಂದಕುಮಾರ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.