ಗುರುವಾಯನಕೆರೆ: ಗುರುವಾಯನಕೆರೆಯ ಜೈನ್ ಪೇಟೆಯ ತಿರುವು ರಸ್ತೆಯಲ್ಲಿ ರಾತ್ರಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ.2ರಂದು ರಾತ್ರಿ ನಡೆದಿದೆ.
ಬೈಕ್ ಸವಾರ ಗೇರುಕಟ್ಟೆ ನಿವಾಸಿ ಶಿವಶಂಕರ್ ಎಂದು ತಿಳಿದು ಬಂದಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.