ಬೆಳ್ತಂಗಡಿ;: ಉಜಿರೆಯ ಸಂತ ಅಂತೋನಿ ಚರ್ಚ್ ಇದರ ಭಾ ರತೀಯ ಕೆಥೋಲಿಕ್ ಯುವ ಸಂಚಲನ ಬೆಳ್ತಂಗಡಿ ವಲಯ ಮತ್ತು ಉಜಿರೆ ಘಟಕ,ಮಂಗಳೂರಿನ ರೆಡ್ ಡ್ರಾಪ್ ಹಾಗು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಉದ್ಘಾಟಿಸಿ ರಕ್ತದಾನ ಮಾಡುವುದರಿಂದ ಅಗತ್ಯವುಳ್ಳವರಿಗೆ ಜೀವದಾನ ಮಾಡಿದಂತೆ . ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದುದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಮತ್ತೆ ಹೊಸ ರಕ್ತ ಉತ್ಪಾದನೆಯಾಗಿ ನವ ಚೈತನ್ಯ ಮೂಡುವುದು ಎಂದರು. ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ ರಕ್ತದಾನದ ಮಹತ್ವದ ಕುರಿತು ತಿಳಿಸಿದರು.

ಉಜಿರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಬೆಳ್ತಂಗಡಿ ವಲಯ ಐ ಸಿ ವೈ ಎಂ ಅಧ್ಯಕ್ಷ ಎವ್ಲಿನ್ ಪ್ರಶಾಂತ್ ಡಿಕುನ್ಹಾ,ಕಾರ್ಯದರ್ಶಿ ಲವಿಷ್ಟ ಕ್ರಾಸ್ತಾ , ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ! ಅನ್ನಾ ನಿಕಿತಾ ಬಾಬು,ಉಜಿರೆ ಐ ಸಿ ವೈ ಎಂ ಘಟಕ ಅಧ್ಯಕ್ಷ ಜೊಯ್ವಿನ್ ರೋಡ್ರಿ ಗಸ್ ,ಕಾರ್ಯದರ್ಶಿ ಜೆನಿಫರ್ ಸಲ್ದಾನ,ಸಂಘದ ಸದಸ್ಯರು ಹಾಗು ರಕ್ತದಾನ ಮಾಡಿದ ರಕ್ತದಾನಿಗಳು ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು .
