Home ಸ್ಥಳೀಯ ಸಮಾಚಾರ ಕಟ್ಟದಬೈಲು ಸಂತಾನಪ್ರದ‌ ನಾಗಕ್ಷೇತ್ರದಲ್ಲಿ‌ ಶ್ರೀ ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪುನರ್ ಪ್ರತಿಷ್ಠೆ

ಕಟ್ಟದಬೈಲು ಸಂತಾನಪ್ರದ‌ ನಾಗಕ್ಷೇತ್ರದಲ್ಲಿ‌ ಶ್ರೀ ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪುನರ್ ಪ್ರತಿಷ್ಠೆ

133
0

ಧರ್ಮಸ್ಥಳ; ಸಂತಾನ ಪ್ರದ ನಾಗಕ್ಷೇತ್ರ ಕಟ್ಟದಬೈಲು ಇಲ್ಲಿ ಎ 26 ಶುಕ್ರವಾರದಂದು ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ಹಾಗೂ ಡೆಕ್ಕರತ್ತಾಯ (ರಕ್ತೇಶ್ವರಿ ), ಪಂಜುರ್ಲಿ ದೈವಗಳ ಪುನರ್ಪ್ರತಿಷ್ಠೆ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಹಿರಿಯಮುಖಂಡರೂ ವಿಧಾನ ಪರುಷತ್ ಸದಸ್ಯರೂ ಆದ ಪ್ರತಾಪ್ ಸಿಂಹ ನಾಯಕ್ ಅವರು ಶ್ರೀ ನಾಗಸನ್ನಿದಿ ಕಟ್ಟದಬೈಲು ಶ್ರೀ ನಾಗಕ್ಷೇತ್ರಕ್ಕೆ ಆಗಮಿಸಿ ಅರ್ಚಕರಾದ ರವಿ ಕುಮಾರ್ ಭಟ್ ಪಜೀರಡ್ಕ ಅವರಿಂದ ಶ್ರೀ ನಾಗದೇವರ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದೆಯೂ ಶ್ರೀ ನಾಗಸನ್ನಿದಿ ಕಟ್ಟದಬೈಲು ಇಲ್ಲಿಗೆ ಬರುವ ಭಾಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ )ಇದರ ಗೌರವಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿಮತ್ತು ಊರ ಸಮಸ್ತ ಬಾಂಧವರು ಉಪಸ್ಥಿತರಿದ್ದರು.
ಊರ ಮತ್ತು ಪರವೂರ ಸಮಸ್ತ ಬಾಂಧವರ ಶ್ರಮ ಮತ್ತು ಸಹಕಾರದಿಂದ
ಈ ಒಂದು ದೇವರ ಕಾರ್ಯ ಸಂಪೂರ್ಣ ಯಶಸ್ವಿಯಾಗಿ ನೆರವೇರಿದ್ದು. ಇದಕ್ಕಾಗಿ ಎಲ್ಲರೀತಿಯಲ್ಲಿಯೂ ಸಹಕರಿಸಿದ ಎಲ್ಲರಿಗೂ ಸಮಿತಿಯವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here