Home ರಾಜಕೀಯ ಸಮಾಚಾರ ತಾಲೂಕಿನಲ್ಲಿ ಮತದಾನಕ್ಕೆ ಚಾಲನೆ; ಉತ್ಸಾಹದಿಂದ ಭಾಗವಹಿಸುತ್ತಿರುವ ಮತದಾರರು

ತಾಲೂಕಿನಲ್ಲಿ ಮತದಾನಕ್ಕೆ ಚಾಲನೆ; ಉತ್ಸಾಹದಿಂದ ಭಾಗವಹಿಸುತ್ತಿರುವ ಮತದಾರರು

0

ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಜನರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ತಾಲೂಕಿಕಿನ 241 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮತಗಟ್ಟೆಗಳ ಹೊರಗೆ ಇದ್ದು ಮತದಾರರ ಮೇಲೆ ಪ್ರಭಾವ ಬೀರುವ, ಮತದಾರರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದಾರೆ.
ತಾಲೂಕಿನ ಒಂದೆರಡು ಮತಗಟ್ಟೆಗಳಲ್ಲಿ ಮತಯಂತ್ರದ ಸಣ್ಣ ಸಮಸ್ಯೆಗಳು ಆಗಿರುವುದನ್ನು ಹೊರತು ಪಡಿಸಿದರೆ ಮತದಾನ ಸುಗಮವಾಗಿಯೇ ನಡೆಯುತ್ತಿದೆ.

ಬೆಳ್ತಂಗಡಿಯಲ್ಲಿ 232817 ಮತದಾರರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,17,603 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.
ಬೆಳ್ತಂಗಡಿವಿಧಾನಸಭಾ ಕ್ಷೇತ್ರದಲ್ಲಿ 115331 ಪುರುಷರು, 117485
ಮಹಿಳೆಯರು ಮತ್ತು ಓರ್ವ ಇತರ ಸೇರಿದಂತೆ ಒಟ್ಟು 232817 ಮತದಾರರು ಇದ್ದಾರೆ.
ಶಾಂತಿಯುತ ಮತದಾನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಆರಂಭಗೊಂಡಿದೆ.
ಹಲವೆಡೆ ಮತಗಟ್ಟೆಗಳಲ್ಲಿ ಜನರು ಸರತಿಯ ಸಾಲಿನಲ್ಲಿ ನಿಂತು ಮತದಾನಕ್ಕೆ ಕಾಯುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version