ಬೆಳ್ತಂಗಡಿ:”ದೇಶದ ಪ್ರಜ್ಞಾವಂತಮತದಾರರು ಭಾರತದ ಬೆಳವಣಿಗೆಗೆ ಕಾತುರರಾಗಿದ್ದಾರೆ. ನೀಡಿದ ಭರವಸೆಗಳನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿ ಪ್ರದಾನಿಯಾಗುವುದನ್ನು ಯಾವ ದುಷ್ಟಶಕ್ತಿಯಿಂದ ಸಾಧ್ಯವಿಲ್ಲ.ದ.ಕ ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ನೋಡಿದರೆ 3 ಲಕ್ಷಕ್ಕು ಅಧಿಕ ಮತಗಳಿಂದ ಬಿಜೆಪಿ ಗೆಲುವು ಖಚಿತ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಶನಿವಾರ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಪರ ಮತಯಾಚನೆಗೆ ಉಜಿರೆಯಲ್ಲಿ ಬೃಹತ್ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದ ನಂತರ ಬರಗಾಲ ತಾಂಡವಾಡುತ್ತಿದೆ.ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ.ಹಿಂದೂ ಹೆಣ್ಣುಮಕ್ಕಳ ಕೊಲೆಯಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳು ಮನೆ ವಾಪಾಸು ಬರುವುದು ಹೇಗೆ ಎಂಬ ಆತಂಕ ಎದುರಾಗಿದೆ” ಎಂದರು. ಮತ್ತೆ ಬಿಜೆಪಿ ಗೆಲ್ಲಿಸುವ ಮೂಲಕ ದೇಶ ದ್ರೋಹಿ ಕಾಂಗ್ರೆಸ್ ಮುಖಂಡರಿಗೆ ತಕ್ಕ ಪಾಠ ಕಲಿಸಬೇಕು.ಪ್ರತಿಯೊಬ್ಬರು ನೀಡುವ ಒಂದೊಂದು ಮತವೂ ದೇಶ ರಕ್ಷಣೆಗೆ ನೀಡುವ ಮತ ಎಂದು ಜನರಿಗೆ ತಿಳಿಸುವ ಕಾರ್ಯವಾಗಬೇಕು” ಎಂದರು.
ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಮಾತನಾಡಿ “ಇದು ದೇಶದ ಭವಿಷ್ಯದ ಚುನಾವಣೆ. ಎಲ್ಲಾ ಕಾರ್ಯಕರ್ತರು ಇನ್ನು ಐದು ದಿನ ಬಿಜೆಪಿ ಬಗ್ಗೆ , ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಬಗ್ಗೆ ಮಾತನಾಡಬೇಕು ಆ ಮೂಲಕ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು” ಎಂದರು. ಶಾಸಕ ಹರೀಶ್ ಪೂಂಜ ಮಾತನಾಡಿ ” ರಾಜ್ಯದಲ್ಲಿ 28 ಸ್ಥಾನಗಳನ್ನು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಬಿ. ವೈ.ವಿಜಯೇಂದ್ರರನ್ನು ಮುಖ್ಯ ಮಂತ್ರಿಯಾಗುವ ಭಾಗ್ಯ ಕರುಣಿಸೋಣ “ಎಂದರು. ಕಾರ್ಯಕ್ರಮದಲ್ಲಿ ಮಂಡಲ ಅದ್ಯಕ್ಷ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪ್ ಸಿಂಹ ನಾಯಕ್, ಎಸ್ .ಎಲ್. ಬೋಜೇಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ,ಮುಖಂಡರುಳು ಭಾಗಿಗಳಾದರು.