ಬೆಳ್ತಂಗಡಿ; ಬಾಂಜಾರು ಮಲೆ ಸಮುದಾಯ ಭವನ ಮತಗಟ್ಟೆ 86 ಕ್ಕೆ ದ.ಕ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಆನಂದ್ ಕೆ.ಬುಧವಾರ ಭೇಟಿ ನೀಡಿ ಶೇ.100 ಮತದಾನಕ್ಕಾಗಿ ಮತದಾರರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಲೋಕೇಶ್, ಬೆಳ್ತಂಗಡಿ ತಾ.ಪಂ ಇಒ ಮತ್ತು ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ವೈಜಣ್ಣ
ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ ದ.ಕ ಸ್ವೀಪ್ ಸಮಿತಿ ಎಸ್ ಎಲ್ ಎಂಟಿ ಪ್ರಮೀಳಾ ರಾವ್,ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ ಸದಸ್ಯರಾದ ಡೊಂಬಯ್ಯ ಇಡ್ಕಿದು,ತಾಪಂ ವ್ಯವಸ್ಥಾಪಕ ಪ್ರಶಾಂತ್ ಡಿ.,
ಜಿಲ್ಲಾ ಸ್ವೀಪ್ ಸಮಿತಿಯ ಡಿಎಲ್ ಎಂಟಿ ಯೋಗೇಶ ಎಚ್.ಆರ್.,ನೆರಿಯ ಗ್ರಾಪಂ ಪಿಡಿಒ ಸುಮಾ, ಬಿಎಲ್ ಒ ಮಧುಮಾಲಾ ಮತ್ತು ಬಾಂಜಾರು ಮಲೆಯ ಬಹುತೇಕ ಮತದಾರರು ಉಪಸ್ಥಿತರಿದ್ದರು.