Home ರಾಜಕೀಯ ಸಮಾಚಾರ ನ್ಯಾಯವಾದಿ ಕೆ ಪ್ರಕಾಶ್ ಶೆಣೈ ಕಾಂಗ್ರೇಸ್ ಸೇರ್ಪಡೆ.

ನ್ಯಾಯವಾದಿ ಕೆ ಪ್ರಕಾಶ್ ಶೆಣೈ ಕಾಂಗ್ರೇಸ್ ಸೇರ್ಪಡೆ.

0

ಬೆಳ್ತಂಗಡಿಯ ನ್ಯಾಯವಾದಿ, ಜಿ ಎಸ್ ಬಿ ಮುಖಂಡ ಕೆ ಪ್ರಕಾಶ್ ಶೆಣೈ ಯವರು ಇಂದು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾಜಿ ಶಾಸಕರಾದ ಜೆ.ಆರ್ ಲೋಬೋ ಮತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರ ಜೊತೆಯಲ್ಲಿ ಇವರ ಸಹೋದರ ಪದ್ಮನಾಭ ಶೆಣೈ, ಸಹೋದರಿ ದಿವ್ಯಾಲಕ್ಷ್ಮಿ ಮತ್ತು ರೋಹಿತ್ ನಾಯ್ಕ ರವರು ಕಾಂಗ್ರೇಸ್ ಪಕ್ಷವನ್ನು ಸೇರಿದರು.

ಈ ಸಂದರ್ಭದಲ್ಲಿ ಮಾಜಿ ಕೆ ಪಿ ಸಿ ಸಿ ವಕ್ತಾರರಾದ ಎ ಸಿ ವಿನಯರಾಜ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಸತೀಶ್ ಬಂಗೇರ, ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ಚುನಾವಣಾ ಉಸ್ತುವಾರಿ , ಧರನೇಂದ್ರ ಕುಮಾರ್, ಪ್ರಚಾರ ಸಮಿತಿ ಉಸ್ತುವಾರಿ ಶೇಖರ್ ಕುಕ್ಕೇಡಿ, ಲೋಕೇಶ್ವರಿ ವಿನಯಚಂದ್ರ, ಉಭಯ ಅಲ್ಪಸಂಖ್ಯಾತ ಕಾಂಗ್ರೇಸ್ ಘಟಕ ಅಧ್ಯಕ್ಷರುಗಳಾದ ಕರೀಂ ಗೇರುಕಟ್ಟೆ, ಜೈಸನ್ ಪಟ್ಟೇರಿ, ಉಭಯ ಬ್ಲಾಕ್ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷರುಗಳಾದ ನಮಿತಾ ಕೆ ಪೂಜಾರಿ ಮತ್ತು ವಂದನಾ ಭಂಡಾರಿ, ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಮಹಮ್ಮದ್ ಶಾಫಿ ಮುಂತಾದವರು ಉಪಸ್ಥಿರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version