Home ಅಪರಾಧ ಲೋಕ ಗೇರುಕಟ್ಟೆಯಲ್ಲಿ ಭಾರೀ ಪ್ರಮಾಣದ ಗಾಂಜಾ ಪತ್ತೆ ಇಬ್ಬರ ಬಂಧನ

ಗೇರುಕಟ್ಟೆಯಲ್ಲಿ ಭಾರೀ ಪ್ರಮಾಣದ ಗಾಂಜಾ ಪತ್ತೆ ಇಬ್ಬರ ಬಂಧನ

0

ಬೆಳ್ತಂಗಡಿ; ಗೇರುಕಟ್ಟೆಯಲ್ಲಿ ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಬೆಳ್ತಂಗಡಿ ಪೊಲೀಸರು ವಶಪಡಿಸಿಕೊಂಡಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಗೇರುಕಟ್ಟೆ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಮುಂಡಾಜೆ ಸೋಮಂದಡ್ಕ ನಿವಾಸಿ ಸತೀಶ್ ಯಾನೆ ಸ್ಕಾರ್ಪಿಯೋ ಸತೀಶ್ ಎಂಬಾತನಾಗಿದ್ದಾನೆ.

ಗುರುವಾರ ಬೆಳಿಗ್ಗೆ ಆರೋಪಿಗಳು ಸ್ಕೂಟಿಯೊಂದಿಗೆ ಗೇರುಕಟ್ಟೆಯ ಓಡುರೊಟ್ಟು ಎಂಬಲ್ಲಿ ಅನುಮಾನಾಸ್ಪದವಾಗಿ ನಿಂತಿರುವುದನ್ನು ನೋಡಿದ ಬೆಳ್ತಂಗಡಿ ಪಿ.ಎಸ್.ಐ ಚಂದ್ರಶೇಖರ್ ಹಾಗೂ ತಂಡ ತಡೆದು ವಿಚರಣೆ ನಡೆಸಿ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿಯಿಂದ 2.10ಕೆ.ಜಿ ಗಾಂಜಾ ಅಲ್ಲದೆ ಸತೀಶ್ ಕೈಯಲ್ಲಿ 55ಗ್ರಾಂ ಗಾಂಜಾ ಪತ್ತೆಯಾಗಿದೆ. ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು,‌‌ ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ
ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದು,
ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ


ಆರೋಪಿಗಳ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿಗಳ‌ ವಿಚಾರಣೆ ನಡೆಸುತ್ತಿದ್ದು ಗಾಂಜಾ ಸಾಗಾಟ ಜಾಲವನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ.
ಪೊಲೀಸರು ನಡೆಸಿದ ದೊಡ್ಡ ಮಟ್ಟದ ಗಾಂಜಾ ಬೇಟೆ ಇದಾಗಿದೆ‌.

NO COMMENTS

LEAVE A REPLY

Please enter your comment!
Please enter your name here

Exit mobile version