Home ರಾಜಕೀಯ ಸಮಾಚಾರ ಪೆರಾಡಿಯಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಕುಟುಂಬ ಸಮ್ಮಿಲನ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ; ರಕ್ಷಿತ್ ಶಿವರಾಂ

ಪೆರಾಡಿಯಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಕುಟುಂಬ ಸಮ್ಮಿಲನ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ; ರಕ್ಷಿತ್ ಶಿವರಾಂ

0

ಬೆಳ್ತಂಗಡಿ; .”ಪ್ರತಿ ಕುಟುಂಬಕ್ಕೆ 5ರಿಂದ 6 ಸಾವಿರದ ವರೆಗೆ ಗ್ಯಾರಂಟಿ ಯೋಜನೆಗಳಿಂದ ಸಿಗುತ್ತೆದೆ. ತಾಲೂಕಿನ 96% ಕುಟುಂಬಗಳಿಗೆ ಈಗಲೇ ಇದು ಸಿಗುತ್ತಿದ್ದು, ಒಂದೇ ಒಂದು ಕುಟುಂಬವೂ ಇದರಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುತ್ತೇವೆ ಎಂದು ಕೆ.ಪಿ.ಸಿ.ಸಿ
ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಪೆರಾಡಿ ಮಾವಿನ ಕಟ್ಟೆಯಲ್ಲ ಕಾಶಿಪಟ್ನ, ಪೆರಾಡಿ, ಮರೋಡಿ, ಮತ್ತು ಸಾವ್ಯ ಗ್ರಾಮಗಳ ಗ್ಯಾರಂಟಿ ಯೋಜನೆಯ ಫಲಾನುಭಾವಿಗಳ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸ್ಥಳೀಯ ಶಾಸಕರ ಭ್ರಷ್ಟಾಚಾರದ ವಿರುದ್ಧ ಗುಡುಗಿದ ರಕ್ಷಿತ್ ಶಿವರಾಂ ಅವರು ಅಭಿವೃದ್ಧಿಗೆ ಪಕ್ಷ ಎಂದೂ ವಿರೋಧಿಯಲ್ಲ. ಬೆಳ್ತಂಗಡಿಯ ಹೊಸ ಬಸ್ ನಿಲ್ದಾಣವಾಗಲಿ ಅಥವಾ ಇನ್ನಿತ್ತರ ಅಭಿವೃದ್ಧಿ ಕಾಮಗಾರಿಗೆ ನಮ್ಮ ಸಹಕಾರ ಇದ್ದೆ ಇರುತ್ತೆ. ಆದರೆ 40% ಕಮಿಷನ್,ಕಾಮಗಾರಿಯಾಗದೆ ಬಿಲ್ ಪಾವತಿಸಿದ್ದು, ಟೆಂಡರ್ ಕರೆಯದೆ ಕೆಲಸ ಮಾಡಿಸಿದ್ದು ಚುನಾವಣೆ ಸಮಯದಲ್ಲಿ ಅಡ್ವಾನ್ಸ್ ಆಗಿ ಕಾಮಗಾರಿ ಮಾಡಿಸಿದ್ದು ಇತ್ಯಾದಿ ಬಗ್ಗೆ ನಮ್ಮ ವಿರೋಧವಿದೆ ಎಂದರು.ಸ್ಥಳೀಯ ಶಾಸಕರು ವಕೀಲರೂ ಆಗಿದ್ದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ, ಮತ್ತು ಇದೇ ಊರಿನಲ್ಲಿ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಮಾಡಿಕೊಡು ಬಾಲಿಶವಾಗಿ ಮಾತಾಡುವುದು ಶಾಸಕನಾದವನಿಗೆ ಶೋಭೆ ತರುವ ವಿಚಾವಲ್ಲ ಎಂದರಲ್ಲದೆ ವಿಷ ಕಕ್ಕುದನ್ನು ಬಿಟ್ಟು ಅಭಿವೃದ್ಧಿ ವಿಷಯಗಳ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದರು .
ಅಕ್ರಮ – ಸಕ್ರಮ ವಿಷಯದಲ್ಲಿ ಮಾತಾಡಿದ ಅವರು ಸರಿಯಾದ ರೆಕಾರ್ಡ್ ಇರುವ ಬಡವರಿಗೆ ಪ್ರಾಮಾಣಿಕವಾಗಿ, ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಜಾತಿ ,ಧರ್ಮ ಪಕ್ಷ ಭೇದ ಮಾಡದೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಾಲ್ಕು ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತನ್ನು ಮತ್ತು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಬಂಗೇರರವರನ್ನು ಅಭಿನಂಧಿಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಪರ; ಸೊರಕೆ
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತಾಡಿ ಹಂತ ಹಂತವಾಗಿ ಅದು ‘ಉಳುವವನೇ ಹೊಲದ ಒಡೆಯ’,ಅಕ್ರಮ -ಸಕ್ರಮದಂತ ಯೋಜನೆಗಳು ಅಥವಾ ಇನ್ನಿತ್ತರ ಜನಪರ ಯೋಜನೆಗಳು,ಇತ್ತೀಚಿನ ಕರ್ನಾಟಕ ಸರಕಾರದ 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಸರಕಾರಗಳು ಬಡವರಿಗಾಗಿ ರೂಪಿಸಿರುವ ಕೊಡುಗೆ ಗಳಾಗಿದೆ, ಪಕ್ಷ ಎಂದೂ ಜನಪರ ಅದರಲ್ಲಿ ವಿಶೇಷವಾಗಿ ಬಡ ಜನರ ಸಹಾಯಕ್ಕೆ ನಿಂತಿದೆ ಎಂದರು.

ಬಿಜೆಪಿ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ; ಪದ್ಮರಾಜ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಮಾತಾಡಿ ನಾವೆಲ್ಲರೂ ಭಾರತೀಯರು,ನಮ್ಮ ಜಾತಿ ಮನುಜ ಕುಲ ,ಬಿಜೆಪಿ ಪಕ್ಷ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ರಾಜಕೀಯ ಮಾಡಿ ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯಕ್ಕೆ ತೊಡಗಿದೆ , ಬಡವರ ಬಗ್ಗೆ ಕಾಳಜಿ ಇರುವ ನಮ್ಮ ಪಕ್ಷ ಗ್ಯಾರಂಟಿಗಳ ಮೂಲಕ ಸಹಾಯ ಮಾಡಿದೆ ಹಿರಿಯ ಮುತ್ಸದ್ದಿ ಮಾಜಿ ಕೇಂದ್ರ ಸಚಿವ ಶ್ರೀ ಜನಾರ್ಧನ ಪೂಜಾರಿಯವರ ಬಡವರಿಗಾಗಿಯೇ ಮಾಡಿದ ಯೋಜನೆ ‘ಸಾಲ ಮೇಳ’ ವನ್ನು ಅವರು ಸ್ಮರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಎಂಎಸ್ ಮಹಮ್ಮದ್ ಮಾತಾಡಿ ಬಿಜೆಪಿ ಪಕ್ಷ ಅಲ್ಪಸಂಖ್ಯಾತ ಸಮುದಾಯನ್ನು ವಿನಾ ಕಾರಣ ದ್ವೇಷ ಮಾಡುತ್ತೆ ಎಲ್ಲರ ಅಭಿವೃದ್ದಿಗೆ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದರು.
ವಾಗ್ಮಿ, ಚಿಂತಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಪಕ್ಷದ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತಾಡಿ, ಶಾಸಕ ಹರೀಶ್ ಪೂಂಜಾ ಒಬ್ಬ ವಕೀಲನಾಗಿ ಈ ರೀತಿ ಬೇಜವಾಬ್ದಾರಿ, ಅಸಂವಿಧಾನಿಕ, ವಿಭಾಜಕ, ವಿಷಬೀಜ ಬಿತ್ತುವಂತಹ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಕಲಿತ ವಿಧ್ಯೆಯ ಬಗ್ಗೆ ಸಂಶಯ ಮೂಡುತ್ತೆ ಎಂದರು. ಸರಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ಮೋದಿ ಸರಕಾರದ ಬೆಲೆ ಏರಿಕೆಯಿಂದ ಕೊಂಚ ಶಮನ ನೀಡೆದೆ,ಈ ಸಣ್ಣ ಊರಿನಲ್ಲಿ ಇಷ್ಟು ಜನಗಳು ಸೇರಿದ್ದು ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು

ಬ್ಲಾಕ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ,ಜಿಪ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ್ ಶೆಟ್ಟಿ ಆರಂಬೋಡಿ,ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ,ಉದ್ಯಮಿ ಪ್ರವೀಣ್ ಫೆರ್ನಾಂಡಿಸ್ ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ ,ಪ್ರಮುಖರಾದ ,ಶ್ರೀ ಪಿಕೆ ರಾಜು ಪೂಜಾರಿ,ಎಂ ಕೆ ಅರಿಗ ಮರೋಡಿ, ಶ್ರೀ ದೈವ ಕೊಡಮಂತ್ತಾಯ ಭ್ರಮ ಬೈದರ್ಕಳ ಗರಡಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ , ಗ್ರಾ ಪ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಅಣ್ಣಿ ಪೂಜಾರಿ ಕಲ್ಲಟ್ಟ ,ಇಗ್ನೇಶಿಸ್ ಶಾಂತಿಸ್ ಮರೋಡಿ , ಲೀನಾಕೋಸ್ತಾ , ಸಂಜೀವ ಶೆಟ್ಟಿ , ರೂಪಲತಾ ,ಪ್ರವೀಣ್ ಪಿಂಟೋ ಕಾಶಿಪಟ್ನ , ರಾಜೇಶ್ ಶೆಟ್ಟಿ , ವಿಶ್ವನಾಥ್ ಬಂಗೇರ, ಗೋಪಾಲಶೇರಿಗಾರ ,
ದಿನೇಶ್ ಕೋಟಿಯನ್ ಸಾವ್ಯ, ಸೂರ್ಯನಾರಾಯಣ ಡಿಕೆ ,ವಿಠ್ಠಲ ,ಸಂತೋಷ್ ಹೆಗ್ಡೆ ,ಮೊಹಮ್ಮದ್ ಶಾಫಿಕಿರೋಡಿ , ನಾರಾಯಣ ಉಚ್ಚುರು ಪೆರಾಡಿ ಮಸೀದಿ ಅಧ್ಯಕ್ಷ ಸಲಾಂ ಮತ್ತು ನೂರಾರು ಗ್ಯಾರಂಟಿ ಯೋಜನೇಯ ಫಲಾನುಭವಿಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ ,ಸಾಂತ್ವನ ನಿಧಿ ಮತ್ತು ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು,


ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಂದೀಪ್ ನಿರಲ್ಕೆ ಕಾರ್ಯಕ್ರಮ ಸಂಯೋಜಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version