Home ಸ್ಥಳೀಯ ಸಮಾಚಾರ ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರದಲ್ಲಿ ಮೂಡಪ್ಪಸೇವೆ

ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರದಲ್ಲಿ ಮೂಡಪ್ಪಸೇವೆ

107
0

Sautaḍka śrīmahāgaṇapati kṣētradalli mūḍappasēve

ಕೊಕ್ಕಡ: ಬಯಲು ಆಲಯ ಮತ್ತು ಗಂಟೆಗಳ ಹರಕೆಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ವರ ನೇತೃತ್ವದಲ್ಲಿ ಮಾಘ ಶುದ್ಧ ಚತುರ್ಥಿ ಫೆ 13 ರಂದು ಮಂಗಳವಾರ ಬೆಳಿಗ್ಗೆ 108 ತೆಂಗಿನಕಾಯಿ ಗಣಹೋಮ ಹಾಗೂ ರಾತ್ರಿ ಸಂಭ್ರಮದ ಮೂಡಪ್ಪ ಸೇವೆ ವೈಭವದಿಂದ ಸುಸಂಪನ್ನಗೊಂಡಿತು.

ಬೆಳಿಗ್ಗೆ ಯಿಂದ ರಾತ್ರಿಯವರೆಗೂ ದೇವಸ್ಥಾನ ಮುಂಭಾಗದ ಬಯಲು ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಉಪ್ಪಿನಂಗಡಿಯ ವಾಮನ ನಾಯಕ್ ನೇತೃತ್ವದಲ್ಲಿ ನಿರಂತರ ಭಜನಾ ಸೇವೆ ನಡೆಯಿತು. ,ಸಂಜೆ ಶ್ರೀ ಗಣೇಶ ರಂಗಮಂಟಪದಲ್ಲಿ ಶ್ರೀ ಕ್ಷೇತ್ರ ಸೌತಡ್ಕದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ”, ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕೊಕ್ಕಡ ಶಾಖೆಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್,ವಿದುಷಿ ಪ್ರೀತಿ ಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ನಿರ್ದೇಶನದಲ್ಲಿ “ನೃತ್ಯಾಂ ಜಲಿ “ಮತ್ತು ರಾತ್ರಿ ಝೀ ಕನ್ನಡ ವಾಹಿನಿಯ ದ..ಕ. ಜಿಲ್ಲೆಯ ಬಿ.ಸಿ.ರೋಡಿನ ನೃತ್ಯ ತಂಡದ ತುಳು ಚಲನಚಿತ್ರ ನಿರ್ದೇಶಕ ವಿನೋದ್ ರಾಜ್ ನೇತೃತ್ವದ “ಎಕ್ಸ್ಟೀಮ್ ಡಾನ್ಸ್ ಕ್ರೂ ” ತಂಡದಿಂದ “ಡಾನ್ಸ್ ಕರ್ನಾಟಕ ಡಾನ್ಸ್ ” ನೃತ್ಯ -ಗಾನ -ಸಂಭ್ರಮ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು. ಧರ್ಣಪ್ಪ ಎಂ.ಪಟ್ಟೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಗಣಪತಿ ಕ್ಷೇತ್ರವನ್ನು ವಿಶೇಷವಾಗಿ ಫಲ -ಪುಷ್ಪ- ವಿದ್ದ್ಯುದ್ದೀಪಾಲಂಕಾರ ಹಾಗು ಆಕರ್ಷಕ ರಂಗವಲ್ಲಿಗಳಿಂದ ಶೋಭಾಯಮಾನವಾಗಿ ಶೃಂಗರಿಸಲಾಗಿತ್ತು. ವಿವಿಧ ವಾದ್ಯ ವೈಭವಗಳೊಂದಿಗೆ ರಾತ್ರಿ ಶ್ರೀ ದೇವರ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ಸಂಪನ್ನಗೊಂಡಿತು.

ಸಹಸ್ರಾರು ಭಕ್ತಾದಿಗಳು ಮಹೋತ್ಸವ ಸಂಭ್ರಮ ಕ್ಕೆ ಸಾಕ್ಷಿಯಾಗಿದ್ದರು. ಸುಮಾರು 4೦೦೦ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಇಡೀ ದಿನ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ದೇವಸ್ಥಾ ನದ ಆಡಳಿತಾಧಿಕಾರಿ,ತಹಸೀಲ್ದಾರ್ ಪೃಥ್ವಿ ಸಾನಿಕಂ,ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರು ಪ್ಪಾಡಿ, ಅರ್ಚಕರಾದ ವೇದಮೂರ್ತಿ ಸತ್ಯಪ್ರಿಯ ಕಲ್ಲೂರಾಯ,ಸುಬ್ರಹ್ಮಣ್ಯ ತೊಡ್ತಿಲ್ಲಾಯ ಮತ್ತು ಗುರುರಾಜ ಉಪ್ಪಾರ್ಣ,ಪಾಕತಜ್ಞ ಭೀಮ ಭಟ್, ಕ್ಷೇತ್ರ ಕ್ಕೆ ಸೇವಾ ಕೌಂಟರ್ ಕೊಡುಗೆ ನೀಡಿದ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಧಾಕರ ಕೊಠಾರಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್, ಡಾ!ಮೋಹನದಾಸ ಗೌಡ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗು ಸಿಬಂದಿ ವರ್ಗ ಮತ್ತು ಭಕ್ತಾದಿಗಳು

LEAVE A REPLY

Please enter your comment!
Please enter your name here