ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ರಾಜ್ಯ ಸಹಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಡಾ.ಜಯಕೀರ್ತಿ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮುಂದಿನ 5ವರ್ಷಗಳ ಆಡಳಿತ ಮಂಡಳಿ ಗೆ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಮುಂದಿನ ಸಾಲಿನ ಅಧ್ಯಕ್ಷರಾಗಿ ಡಾ.ಕೆ ಜಯಕೀರ್ತಿ ಜೈನ್ ಹಾಗೂ ಉಪಾಧ್ಯಕ್ಷರಾಗಿ ಚಿದಾನಂದ ಎಸ್.ಹೂಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ನಿರ್ದೇಶಕರಾಗಿ ಜಯರಾಜ್ ಜೈನ್, ಆರತಿ, ಪರಮೇಶ್ ಟಿ, ಚಂದ್ರಶೇಖರ್, ಅಬ್ದುಲ್ ರಜಾಕ್, ಹರಿಪ್ರಸಾದ್, ಹೇಮಲತಾ, ರತ್ನಾವತಿ, ಪ್ರಶಾಂತ್ ಕುಮಾರ್, ವಾರಿಜ ಕೆ.ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಸಹಕರಿಸಿದರು.