Home ರಾಜಕೀಯ ಸಮಾಚಾರ ಮದ್ಯಪ್ರದೇಶ ಸರಕಾರ ಕೂಡಲೆ ರಾಜ್ಯದ ರೈತರನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ಮದ್ಯಪ್ರದೇಶ ಸರಕಾರ ಕೂಡಲೆ ರಾಜ್ಯದ ರೈತರನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

0

ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿರುವುದು ಖಂಡನೀಯ.
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜಿಕ ಜಾಲತಾಣದ‌ ಮೂಲಕ ತಮ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಬಂಧಿತರಾಗಿರುವ ನಮ್ಮ ರಾಜ್ಯದ ಎಲ್ಲ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಮಧ್ಯಪ್ರದೇಶ ಸರಕಾರವೇ ಬಂಧಿಸಿದ್ದರೂ, ಈ ಕೃತ್ಯದ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದ್ದು ಕ್ರಿಮಿನಲ್ ಬ್ರೈನ್ ಎಂಬುದು ಸ್ಪಷ್ಟವಾಗಿದೆ.

ಅವರನ್ನು ಬಂಧಿಸಿ ಬೆದರಿಸುವ ಮೂಲಕ ರೈತರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿ ಪಾಲಾಗಬಹುದು, ಆದರೆ ಮಣ್ಣಿನ ಮಕ್ಕಳ ಮಕ್ಕಳ ಹೋರಾಟ ನಿಲ್ಲುವುದಿಲ್ಲ. ಕೇಂದ್ರ ಸರಕಾರಕ್ಕೆ ಶಾಂತಿ ಸುವ್ಯವಸ್ಥೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ರೈತರನ್ನು ದಮನಿಸುವ, ದೌರ್ಜನ್ಯ ನಡೆಸುವ ಬದಲು ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕು.

ಕೇಂದ್ರದಲ್ಲಾಗಲಿ, ರಾಜ್ಯಗಳಲ್ಲಾಗಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅವರ ಮೊದಲ ಆಕ್ರಂದನ ರೈತರ ವಿರುದ್ಧವೇ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ರಸಗೊಬ್ಬರ ಕೇಳುವ ರೈತರನ್ನು ನಿರ್ದಯವಾಗಿ ಹೊಡೆದುರುಳಿಸಿದ ಸರ್ಕಾರ ಬಿ.ಎಸ್. ಯಡಿಯೂರಪ್ಪ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಿದ ಹಿಂಸಾಚಾರದಿಂದ ಹಲವಾರು ರೈತರು ಸಾವನ್ನಪ್ಪಿದ್ದಾರೆ.

ನರೇಂದ್ರ ಮೋದಿಯವರ ಈಗಿನ ನಡೆಗಳನ್ನು ನೋಡಿದರೆ ರೈತರನ್ನು ಹೆದರಿಸಿ ಮಣಿಯುವುದೇ ಇವರ ಮುಖ್ಯ ಗುರಿ ಎನಿಸುತ್ತಿದೆ.ಎಂದು ಅವರು ಸಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version