ಪಾಟ್ನಾ; ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿ ಹೊಸದಾಗಿ ಸಿಎಂ ಆದ ನಿತೀಶ್ ಕುಮಾರ್, ಸೋಮವಾರ ವಿಶ್ವಾಸ ಮತಯಾಚನೆ ಮಂಡಿಸಿ ಬಹುಮತ ಸಾಬೀತುಪಡಿಸಿದ್ದಾರೆ. ಬಿಹಾರದ ಮ್ಯಾಜಿಕ್ ನಂಬರ್ 122 ಇದೆ. ನಿತೀಶ್ ಕುಮಾರ್ ಪರ 128 ಶಾಸಕರು ಕೈ ಎತ್ತಿ ಬೆಂಬಲ ಸೂಚಿಸಿದ್ದಾರೆ.
ಈ ಪೈಕಿ ವಿಪಕ್ಷಗಳ ನಾಲ್ಕು ಸದಸ್ಯರೂ ಕೈ ಎತ್ತಿದ್ದಾರೆ. ಆರ್ ಜೆ.ಡಿಯ ನಾಲ್ವರು ಸದಸ್ಯರು ನಿತೀಶದ ಕುಮಾರ್ ಪರವಾಗಿ ಮತಚಲಾಯಿಸಿದ್ದಾರೆ.
ಮತದಾನಕ್ಕೂ ಮುನ್ನ ಆರ್‌ಜೆ.ಡಿ ಹಾಗೂ ಇತರ ವಿರೋಧ ಪಕ್ಷದಗಳ ಸದಸ್ಯರು ವಿಧಾನಸಭೆಯಿಂದ ಹೊರನಡೆಸಿದ್ದರು ಇನ್ನು ಈ ಮೊದಲು ಬಿಹಾರ ವಿಧಾನಸಭೆ ಸ್ಪೀಕರ್ ಆಗಿದ್ದ ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ರಾಜಿನಾಮೆ ನೀಡೋಕೆ ನಿರಾಕರಿಸಿದ್ರು. ಈ ವೇಳೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಲಾಯ್ತು.