Home ರಾಷ್ಟ್ರ/ರಾಜ್ಯ ದೆಹಲಿಯತ್ತ ರೈತರ ಹೋರಾಟ; ಎದುರಿಸಲು ಸಜ್ಜಾಗಿದ್ದರೆ ಪೊಲೀಸರು

ದೆಹಲಿಯತ್ತ ರೈತರ ಹೋರಾಟ; ಎದುರಿಸಲು ಸಜ್ಜಾಗಿದ್ದರೆ ಪೊಲೀಸರು

0

ರೈತರ ಹೋರಾಟ,

ನವದೆಹಲಿ; ಕೃಷಿ ಉತ್ನನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಕೆರಳಿ ಕೆಂಡಕಾರಿರುವ ರೈತರು ‘ದೆಹಲಿ ಚಲೋ ಪ್ರತಿಭಟನೆ ಮಾಡಲು ರಾಷ್ಟ್ರ ರಾಜಧಾನಿಯತ್ತ ಮುನ್ನುಗ್ಗುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋಗೆ ಕರೆ ನೀಡಿವೆ. ಇದಕ್ಕೆ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆ ಸಿಂಘು, ಘಾಜಿಪುರ್, ಟಿಕ್ರಿ ಗಡಿಯಲ್ಲಿ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಬೃಹತ್ ಗಾತ್ರದ ಬ್ಯಾರಿಕೇಡ್, ಕಾಂಕ್ರಿಟ್ ಗೋಡೆ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಕಬ್ಬಿಣದ ಚೂಪಾದ ರಾಡ್‌ಗಳನ್ನು ಹಾಕಿದ್ದಾರೆ. ಇಂಟರ್‌ನೆಟ್ ಸ್ಥಗಿತಗೊಳಿಸಿ ದೆಹಲಿ ಸುತ್ತಲೂ ಪೊಲೀಸರು ಸುತ್ತುವರೆದಿದ್ದಾರೆ.

ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕಿಸುವ ಘಾಜಿಪುರ ಗಡಿಯಲ್ಲಿ ಹೆದ್ದಾರಿಯಲ್ಲೇ ಸಿಮೆಂಟ್​ನಿಂದ ಹೊಸ ತಡೆಗೋಡೆ ನಿರ್ಮಿಸಿ ರೈತರನ್ನು ತಡೆಯಲು ಪ್ಲ್ಯಾನ್ ಮಾಡಲಾಗಿದೆ. ಖಾಕಿ ತಡೆಗೋಡೆ ತಂತ್ರ ಭೇದಿಸಲು, ಪಂಜಾಬ್ ರೈತರು ಸಜ್ಜಾಗಿದ್ದಾರೆ. ಟ್ರ್ಯಾಕ್ಟರ್​ಗಳನ್ನು ಮಾಡಿಫೈ ಮಾಡಿಕೊಂಡು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಪೊಲೀಸರಿಗೆ ಕೌಂಟರ್ ಪ್ಲ್ಯಾನ್ ಮಾಡಿರೋ ರೈತರು, ವಿಶೇಷ ವಾಹನಗಳನ್ನ ಸಿದ್ಧಗೊಳಿಸಿದ್ದಾರೆ. ಅಶ್ರುವಾಯು ವಿರುದ್ಧ ಹೋರಾಡಲು ಬೆಂಕಿ-ನಿರೋಧಕ ಹಾರ್ಡ್-ಶೆಲ್ ಟ್ರೇಲರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ತಾತ್ಕಾಲಿಕ ಜೈಲು ನಿರ್ಮಾಣ: ಹಾನಿಯಾದ್ರೆ ಕಟ್ಟಬೇಕು ದಂಡ

ದೆಹಲಿಯಲ್ಲಿ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು. ಒಂದುವೇಳೆ ರೈತರು ಉದ್ವಿಗ್ನಗೊಂಡ್ರೆ, ನಿಯಂತ್ರಣಕ್ಕಾಗಿ ಹರಿಯಾಣ ಗಡಿಯಲ್ಲಿ ತಾತ್ಕಾಲಿಕವಾಗಿ 2 ಜೈಲುಗಳನ್ನೇ ನಿರ್ಮಿಸಲಾಗಿದೆ. ಹೋರಾಟದಲ್ಲಿ ಆಸ್ತಿ-ಪಾಸ್ತಿ ಹಾನಿಯಾದ್ರೆ ಹೋರಾಟಗಾರರೇ ಕಟ್ಟಬೇಕು ಎಂದು ಹರಿಯಾಣ ಸರ್ಕಾರ ಎಚ್ಚರಿಸಿದೆ.
ಆದರೆ ರೈತರು ಇದು ಯಾವುದನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿಯೇ ಸಿದ್ದ ಎಂದು ಮುಂದುವರಿಯುತ್ತುದ್ದಾರೆ. ಬೇಡಿಕೆಗಳು ಈಡೇರಿಕೆಯಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version