Home ಅಪರಾಧ ಲೋಕ ಕರ್ನಾಟಕದ ಜಿಎಸ್.ಟಿಯ ಒಂದು ಪೈಸೆಯನ್ನೂ ಕೇಂದ್ರ ಉಳಿಸಿಕೊಂಡಿಲ್ಲ; ನಿರಗಮಲ ಸೀತಾರಾಮನ್ ಸ್ಪಷ್ಟನೆ

ಕರ್ನಾಟಕದ ಜಿಎಸ್.ಟಿಯ ಒಂದು ಪೈಸೆಯನ್ನೂ ಕೇಂದ್ರ ಉಳಿಸಿಕೊಂಡಿಲ್ಲ; ನಿರಗಮಲ ಸೀತಾರಾಮನ್ ಸ್ಪಷ್ಟನೆ

63
0
ನವದೆಹಲಿ: ಕರ್ನಾಟಕದ ಜಿಎಸ್ಟಿಯ ಒಂದೇ ಒಂದು ಪೈಸೆಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿಲ್ಲ ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಕರ್ನಾಟಕಕ್ಕೆ ಕಡಿಮೆ ತೆರಿಗೆ ಹಂಚಿಕೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಕುರಿತಂತೆ ಮಾತನಾಡಿದ ಅವರು, ಕರ್ನಾಟಕದಿಂದ ಪಾವತಿಸಲಾಗಿರೋ ಜಿಎಸ್ಟಿ ಹಣದಲ್ಲಿ ಒಂದೇ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ.
ಈ ಬಗ್ಗೆ ಜನರು ಪ್ರಶ್ನೆ ಮಾಡುತ್ತಿಲ್ಲ. ತೆರಿಗೆ ಕಟ್ಟುತ್ತಿರೋದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ ಎಂದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತನಾಡುತ್ತಿರೋ ಭಾಷೆ ಎಲ್ಲ ಜನವಿರೋಧಿಯಾಗಿದೆ. ಕುಟುಂಬವಾದದಲ್ಲೇ ಮುಳಿಗಿರೋ ಕಾಂಗ್ರೆಸ್, ದಾರಿ ತಪ್ಪಿಸೋ ಕೆಲಸ ಮಾಡುತ್ತಿದೆ. ನಾವು ತಾರತಮ್ಯ ಮಾಡಿದ್ದೇವೆ ಎಂಬುದು ಸುಳ್ಳು. ಕಾಂಗ್ರೆಸ್ ನಾಯಕರ ಹೇಳಿಕೆಯು ಕುಚೇಷ್ಟೆಯಿಂದ ಕೂಡಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಕೇಂದ್ರ ಹಂಚುವ ಪ್ರತಿ ರಾಜ್ಯದ ಪಾಲು ಆಯೋಗದಿಂದ ಆಯೋಗಕ್ಕೆ ವ್ಯತ್ಯಾಸವಾಗುತ್ತದೆ. ರಾಜ್ಯಗಳ ಮೇಲೆ ಬೀರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯೋಗ ಶಿಫಾರಸ್ಸುಗಳನ್ನು ಮಾಡುತ್ತದೆ. 14ನೇ ಆಯೋಗದ 5 ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು 1,51,309 ಕೋಟಿ ರೂ.ಗಳ ತೆರಿಗೆ ಹಂಚಿಕೆ ಪಡೆದಿದೆ ಎಂದು ತಿಳಿಸಿದರು.

ಪ್ರಸ್ತುತ 15ನೇ ಹಣಕಾಸು ಅವಧಿಯ ಮೊದಲ 4 ವರ್ಷಗಳಲ್ಲಿ, ಅಂದರೆ 2024ರ ಮಾರ್ಚ್ ವೇಳೆಗೆ ಕರ್ನಾಟಕವು 1,29,854 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇದಲ್ಲದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ 44,485 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಇದರಿಂದ ಕರ್ನಾಟಕ ಸರ್ಕಾರ 2024-25 ಹಣಕಾಸು ವರ್ಷ ಸೇರಿ 5 ವರ್ಷಗಳಲ್ಲಿ ಒಟ್ಟು 1,74,339 ಕೋಟಿ ರೂ.ಗಳನ್ನು ಪಡೆದಂತಾಗಲಿದೆ ಎಂದು ಮಾಹಿತಿಯನ್ನು ನೀಡಿದರು

LEAVE A REPLY

Please enter your comment!
Please enter your name here