Home ಅಪರಾಧ ಲೋಕ ನ್ಯಾಯಾಧೀಶರಿಗೆ ಬೆದರಿಕೆ ನಾಲ್ವರ ಬಂಧನ

ನ್ಯಾಯಾಧೀಶರಿಗೆ ಬೆದರಿಕೆ ನಾಲ್ವರ ಬಂಧನ

0
ತಿರುವನಂತಪುರಂ: ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶೆಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆ ಒಡ್ಡಿದ್ದ ಆರೋಪಿಗಳ ಪೈಕಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಬಂದಿತ ಆರೋಪಿಗಳನ್ನು ಮನ್ನಚೇರಿ ನಿವಾಸಿ ನಸೀ‌ರ್ ಮಾನ್ (47), ಮಂಗಳಪುರಂ ನಿವಾಸಿ ರಫಿ (38), ಅಲಪ್ಪುಝ ನಿವಾಸಿ ನವಾಸ್ ನೈನಾ (42) ಹಾಗೂ ಅಂಬಲಪುಝ ನಿವಾಸಿ ಶಾಜಹಾನ್ (36) ಎಂದು ಗುರುತಿಸಲಾಗಿದೆ.
ಮಾವೆಲಿಕ್ಕರ ಹೆಚ್ಚುವರಿ ಸೆಷನ್ಸ್ ನ ನಾಲ್ಕನೆ ನ್ಯಾಯಾಧೀಶೆ ಶ್ರೀ ದೇವಿ ವಿರುದ್ಧ ಬಂದಿರುವ ಆನ್ ಲೈನ್ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ, ಅವರ ಭದ್ರತೆಯನ್ನು ಉನ್ನತೀಕರಿಸಿದೆ.ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಲಪ್ಪುಝ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಸಂಬಂಧ ಈವರೆಗೆ ಐದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version