ಬೆಳ್ತಂಗಡಿ; ತಾಲೂಕಿನ ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ಹರೀಶ್ ಎಂಬವರ ಮನೆಯಲ್ಲಿ ವೇಳೆ ಬೆಂಕಿ ಅನಾಹುತ ಉಂಟಾಗಿ ಮನೆಗೆ ಭಾರಿ ಹಾನಿಯಾದ ಘಟನೆ ಸೋಮವಾರ ರಾತ್ರಿಯ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ.ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ...
ಬೆಳ್ತಂಗಡಿ: ಧರ್ಮಸ್ಥಳಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ವಿಚಾರಣೆಗಾಗಿ ಎರಡನೇ ಬಾರಿ ಇಬ್ಬರು ಆಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಸೋಮವಾರ ಮಧ್ಯಾಹ್ನ ಬೆಳ್ತಂಗಡಿ ಎಸ್ ಐಟಿಗೆ ಆಗಮಿಸಿದ್ದು ಸಂಜೆಯ ವೇಳೆಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿ ಹಿಂತಿರುಗಿದ್ದಾರೆ.ಬೆಳ್ತಂಗಡಿಯಲ್ಲಿ ಕಳೆದ ಸುಮಾರು 20 ವರ್ಷಗಳಿಗೂ ಹೆಚ್ಚು ಸಮಾಯದಿಂದ ಆಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ಎಸ್ಐಟಿ...
ಬೆಳ್ತಂಗಡಿ:ಮುಂಡಾಜೆಯ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ಭಾನುವಾರ ಜರಗಿತು.ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಶಿಬಿರ ಉದ್ಘಾಟಿಸಿದರು.ಕ್ರೈಸ್ಟ್ ಅಕಾಡೆಮಿಯ ಪ್ರಿನ್ಸಿಪಾಲ್ ಫಾ.ಜಾರ್ಜ್ ಸಿ.ಎಂ.ಐ., ಮುಂಡಾಜೆ ರೋಟರಿ ಸಮುದಾಯದಳದ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಬೆನಕ ಆಸ್ಪತ್ರೆಯ ಜನರಲ್ ಮ್ಯಾನೇಜರ್ ದೇವಸ್ಯ, ಪಿಆರ್ ಒ ಎಸ್.ಜಿ.ಭಟ್, ರೋಟರಿ...
ಬೆಳ್ತಂಗಡಿ : 'ನಾರಾಯಣ ಗುರುಗಳು ಸಮಾಜದ ಪ್ರೇರಣಾ ಶಕ್ತಿ. ಅವರ ವಿಚಾರಧಾರೆಯನ್ನು ಆಧರಿಸಿ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಯುವವಾಹಿನಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಘಟನೆ ಮೂಲಕ ಸಮಾಜ ಉತ್ತಮ ರೀತಿಯಲ್ಲಿ ಸದೃಢವಾಗಿ ಮುಂದುವರಿಯಲಿ' ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು ಹೇಳಿದರು. ಅವರು ಭಾನುವಾರ ಬೆಳ್ತಂಗಡಿ ಯುವವಾಹಿನಿ...
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ಸಂಗ್ರಹದ ಕಾರ್ಯವನ್ನು ಮುಂದುವರಿಸಿದ್ದು ಶನಿವಾರ ಬೆಳ್ತಂಗಡಿಯ ಇಬ್ಬರು ಆಂಬ್ಯೂಲೆನ್ಸ್ ಚಾಲಕರನ್ನು ಕಚೇರಿಗೆ ಕರೆಸಿ ಅವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ.ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಬೆಳ್ತಂಗಡಿ ಯಲ್ಲಿ ಆಂಬ್ಯೂಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿರುವ ಹಮೀದ್ ಹಾಗೂ ಜಲೀಲ್ ಅವರನ್ನು ಕಚೇರಿಗೆ ಕರೆಸಿ ಮಾಹಿತಿಯನ್ನು...
ಬೆಳ್ತಂಗಡಿ; ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಅರಣ್ಯ ಒತ್ತುವರಿ ಮಾಡಿ ಕೃಷಿ ಮಾಡಿದ ಆರೋಪದ ಮೇಲೆ ಅ3ರಂದು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಇಲ್ಲಿನ ನಿವಾಸಿ ಒ.ಪಿ ಜಾರ್ಜ್ ಎಂಬವರ 1.30ಎಕ್ರೆ ಕೃಷಿ ಭೂಮಿಯ ಕೃಷಿಯನ್ನು ಸಂಪೂರ್ಣ ತೆಗೆದು ಹಾಕಿ ಇದೇ ಜಾಗದಲ್ಲಿ ಗಿಡನೆಡುವ ಕಾರ್ಯ ಮಾಡಿದೆ.ಶುಕ್ರವಾರ ಬೆಳಗ್ಗೆ ಪುತ್ತೂರು ಎ.ಸಿ.ಎಫ್ ಅವರ ನೇತೃತ್ವದಲ್ಲಿ...
ಬೆಳ್ತಂಗಡಿ; ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ‌ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಹಿಂತಿರುಗಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ವಿವೇಕಾನಂದ ನಗರ ನಿವಾಸಿ ಎನ್.ಕೆ ಅಶೋಕ್ ಕುಮಾರ್ ಅವರಿಗೆ ಬೆಳ್ತಂಗಡಿಯಲ್ಲಿ ಸಾರ್ವಜನಿಕರು ಭವ್ಯ ಸ್ವಾಗತ ಕೋರಿದರು.2003 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಯಾದ ಅವರು ಬೆಂಗಳೂರು ಜಮ್ಮು, ಕೊಲ್ಕತ್ತಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ...
ಬೆಳ್ತಂಗಡಿ; ಲಾಯಿಲ ಗ್ರಾಮಪಂಚಾಯತು ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಖತ್ತಾರ್ ಮುಹಮ್ಮದ್ ಕುಂಞ್ಞಿ ಹಾಜಿ (67) ಹೃದಯಾಘಾತದಿಂದ ಅ.3ರಂದು ನಿಧನರಾಗಿದ್ದಾರೆ‌.ಮಧ್ಯಾಹ್ನದ ವೇಳೆ ಕುಂಟಿನಿ ಮಸೀದಿಯಲ್ಲಿ ಪ್ರಾರ್ಥನೆ ಗೆ ತೆರಳಿದ್ದವೇಳೆ ಇವರಿಗೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾರೆ.ಲಾಯಿಲ ಗ್ರಾಮದ ಕುಂಟಿನಿ ನಿವಾಸಿಯಾಗಿರುವ ಮುಹಮ್ಮದ್ ಕುಂಞ್ಞಿ ಅವರು ಕತ್ತಾರ್ ನಲ್ಲಿ ಸರಕಾರಿ ಉದ್ಯೋಗಿಯಾಗಿದ್ದರು 30ವರ್ಷಗಳ ಕಾಲ ಕತಾರ್...
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಸಂಬಂಧ ಎಸ್.ಐ.ಟಿ ವಿಚಾರಣೆಗೆ ಹೋರಾಟಗಾರ ಜಯಂತ್.ಟಿ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಎಸ್.ಐ.ಟಿ ಕಚೇರಿಗೆ ಅ3ರಂದು ಆಗಮಿಸಿದ್ದಾರೆ.ಜಯಂತ್ ಟಿ ಅವರ ಮಗ ಸಾಕ್ಷಿದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯನ ವಿಡಿಯೋ ಮಾಡಿದ್ದ ಎನ್ನಲಾಗಿದ್ದು ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿರುವುದಾಗಗಿ ತಿಳಿದು ಬಂದಿತ್ತು.ಇದೀಗ ಜಯಂತ್ ಅವರ...
ಬೆಳ್ತಂಗಡಿ; ಬದ್ಯಾರ್ ಸಮೀಪ ಕಾರುಗಳ ನಡುವೆ ಅ2ರಂದು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಕಾರ್ಕಳದಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳೆ ಕಡೆಗೇ ಹೋಗುತ್ತಿದ್ದ ಕಾರು ಎದುರು ಬದುರಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರುಗಳು ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.