
ಬೆಳ್ತಂಗಡಿ: ಅಂಗಡಿಗೆ ಬಂದಿದ್ದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ತಡವಾಗಿ ಪೋಕೋ ಪ್ರಕರಣ ದಾಖಲಾಗಿದೆ.
ನೊಂದ ಬಾಲಕಿ ಅಂಗಡಿಗೆ ಹೋದಾಗ ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಮೂರ್ನಾಲ್ಕು ಬಾರಿ ಇದೇ ರೀತಿ ದೌರ್ಜನ್ಯ ಮಾಡಿ, ಇದನ್ನು ಯಾರಿಗಾದರೂ ಹೇಳಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಕಳೆದ ತಿಂಗಳು ಬೆಳಿಗ್ಗೆ ಬಾಲಕಿ ಬೀಗ ತೆರೆದಿದ್ದ ಅಂಗಡಿ ಒಳಗೆ ಹೋಗಿ ಬರುವ ಸಮಯ ದಾಖಲಾದ ಸಿ ಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆರೋಪಿ ಬೇರೆಯವರಿಗೆ ಕಳುಹಿಸಿ ಬಾಲಕಿ ಕಳ್ಳಿ ಎಂದು ಬಿಂಬಿಸುವ ಯತ್ನ ಮಾಡದ್ದ ಎಂದು ದೂರಲಾಗಿದೆ. ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ಟಿಕ್ಕಾ ಮಹಮ್ಮದ್ ಗೇರುಕಟ್ಟೆ ಎಂಬಾತನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








