Home ಅಪರಾಧ ಲೋಕ ಬೆಳ್ತಂಗಡಿ : ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಉದ್ಘಾಟನೆ

ಬೆಳ್ತಂಗಡಿ : ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಉದ್ಘಾಟನೆ

13
0

ಬೆಳ್ತಂಗಡಿ : ಸರಕಾರಿ ಅಂಗನವಾಡಿ ಕೇಂದ್ರ ಆರಂಭವಾಗಿ ರಾಜ್ಯದಲ್ಲಿ 50 ವರ್ಷದ ಸುವರ್ಣ ಮಹೋತ್ಸವ ಆಚರಣೆಯ ನೆನಪಿಗಾಗಿ
ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಸಿದ್ದರಾಮಯ್ಯ ನವರು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅಂಗನವಾಡಿ ಶಿಕ್ಷಣ ಕಲಿಯುವಾಗಲೇ ಆಂಗ್ಲ ಮಾಧ್ಯಮ ಕಲಿಯಬೇಕೆಂಬ ಆಶಯದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಇರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ
ಎಲ್.ಕೆ.ಜಿ – ಯು.ಕೆ.ಜಿ  ತರಗತಿಗಳನ್ನು ಆರಂಭಿಸಲು ಬೆಂಗಳೂರಿನ ವಿಧಾನ ಸೌಧದಲ್ಲಿ ದಿನಾಂಕ ನ.28 ರಂದು ಮುಖ್ಯಮಂತ್ರಿಯವರಾದ
ಸಿದ್ದರಾಮಯ್ಯ ನವರು ದೀಪ ಬೆಳಗಿಸಿ ಅಧಿಕೃತವಾಗಿ ಚಾಲನೆ ನೀಡುವ ಅದೇ ಸಮಯದಲ್ಲಿ  (ಬೆಳಗ್ಗೆ 11 ಗಂಟೆಗೆ) ಬೆಳ್ತಂಗಡಿ ನಗರದ ಮುಗುಳಿ ಅಂಗನವಾಡಿ ಕೇಂದ್ರದಲ್ಲೂ
ಪ್ರಥಮ ಬಾರಿಗೆ
LKG – UKG ತರತಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ತಾಲೂಕು ತಹಶಿಲ್ದಾರರಾದ ಶ್ರೀ ಪ್ರಥ್ವಿ ಸಾನಿಕಂ ರವರು ದೀಪ ಪ್ರಜ್ವಲನೆ ಮಾಡಿ ಪಠ್ಯ ಪುಸ್ತಕ ಬಿಡುಗಡೆಗೊಳಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಸರಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳು
ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಂತೆ ಸರಿಸಮಾನವಾಗಿ ಕಲಿಯಬೇಕಾದರೆ ಪ್ರಾಥಮಿಕ ಮಟ್ಟದಲ್ಲಿಯೇ ಆಂಗ್ಲಮಾಧ್ಯಮ ಜ್ಞಾನದ ಅರಿವಿರಬೇಕು ಎಂಬ ಹಿನ್ನೆಲೆಯಲ್ಲಿ ಕರ್ನಾಟಕ ಘನ ಸರಕಾರವು ಅಂಗನವಾಡಿ ಕೇಂದ್ರ ದಲ್ಲಿಯೇ ಆಂಗ್ಲ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ
ಈ ಶಾಲೆಯ ಸ್ಥಳೀಯ
ಜನರ ಮಕ್ಕಳನ್ನು
ಸರಕಾರಿ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿ
ಸರಕಾರದ ಈ ಉಚಿತ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.

ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ  ಪಾರ್ವತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಯವರಾದ  ವಾಣಿಶ್ರೀ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರಕಾರದ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ವಿವರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ
ರಾಜೇಶ್ ಕೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ
ಸವಿತಾ ರವರು,ದಲಿತ ಸಂಘರ್ಷ ಸಮಿತಿ
ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ

ಬಿ.ಕೆ.ವಸಂತ್ ಬೆಳ್ತಂಗಡಿ,
ಸ್ಥಳೀಯ ಮುಖಂಡರಾದ
ಸನತ್ ಕುಮಾರ್ ಜೈನ್,
ರವರುಗಳು ಉಪಸ್ಥಿತರಿದ್ದು
ಕಾರ್ಯಕ್ರಮಕ್ಕೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರಿಸಿದರು.

ಅಂಗನವಾಡಿ ಕೇಂದ್ರದ
ಸಹಾಯಕಿ  ಭಾರತಿ
ಬಾಲ ವಿಕಾಸ ಸಮಿತಿಯ ಸದಸ್ಯರುಗಳಾದ ಅಶ್ವಿನಿ, ಶರೇಖಾ,  ಸವಿತಾ
ಸಹಕರಿಸಿದರು.ಅಂಗನವಾಡಿ ಮಕ್ಕಳ ಪೋಷಕರು ಸ್ಥಳೀಯ ಮಖಂಡರು ಸಾರ್ವಜನಿಕರು ಭಾಗವಹಿಸಿದ್ದರು.ಕಾರ್ಯಕ್ರಮದ ಮೊದಲು
ಮುಗುಳಿ ಶಾಲೆಯ ಸ್ಕೌಟ್ ಗೈಡ್ ಮಕ್ಕಳ ಸಮವಸ್ತ್ರ ಧರಿಸಿ ಕಾರ್ಯಕ್ರಮದ ಗಣ್ಯರನ್ನು ಬ್ಯಾಂಡ್ ವಾಧ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಗೌರವ ಸಲ್ಲಿಸಿದರು .

ಮುಗುಳಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ರೀಮತಿ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here