



ಬೆಳ್ತಂಗಡಿ. ತಾಲೂಕಿನ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಮಚ್ಚಿನ, ಕೊರಂಜ, ಶಾಲೆಗಳನ್ನು ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್ )ಶಾಲೆಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿ ಆದೇಶಿಸಿದೆ. ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸುದ್ದಾರೆ.
ತಾಲೂಕಿನ ಎರಡು ಶಾಲೆಗಳನ್ನು ಕರ್ನಾಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೆ ಏರಿಸುವಂತೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರಿಗೆ ಈ ಹಿಂದೆ ಮನವಿಯನ್ನು ಸಲ್ಕಿಸಲಾಗಿತ್ತು. ಈ ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿ ತಾಲೂಕಿನ ಮಚ್ಚಿನ, ಕೊರಂಜ ಪ್ರಾಥಮಿಕ ಶಾಲೆಗಳು ಕೆಪಿಎಸ್ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆರಿಸಿ ಆದೇಶವನ್ನು ಮಾಡಿದ್ದಾರೆ ಎಂದು ಕೆ.ಪಿ.ಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
