


ಬೆಳ್ತಂಗಡಿ : ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಅಂಗಡಿ ಬಳಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮಧ್ಯ ಸಮೇತ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಧರ್ಮಸ್ಥಳ ಪ್ರಭಾರ ಪಿಎಸ್ಐ ಸಿಕಂಧರ್ ಪಾಷಾ ಸಿಬ್ಬಂದಿಗಳೊಂದಿಗೆ ಕುದ್ರಾಯದ ಅಂಗಡಿಗೆ ದಾಳಿ ನಡೆಸಿ ಪರಿಶೀಲಿಸಿದಾಗ ಅಂಗಡಿಯ ಹೊರಗಡೆ ಹಿಂಬದಿಯಲ್ಲಿ ಗೋಣಿ ಚೀಲದ ಕಟ್ಟೊಂದು ಇದ್ದು, ಅದರ ಸಮೀಪ ಒಬ್ಬ ವ್ಯಕ್ತಿ ನಿಂತುಕೊಂಡಿದ್ದ ಸಾಂತಪ್ಪ ಎಂಬಾತನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಶೋಧನಾ ಕಾರ್ಯ ನಡೆಸಿದಾಗ ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಅಕ್ರಮ ಮಧ್ಯ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದ್ದಾನೆ.
ಪ್ಲಾಸ್ಟಿಕ್ ಗೋಣಿ ಕೈ ಚೀಲವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ 90 ML MYSORE LANCER Whisky ಎಂಬ ಹೆಸರಿರುವ ಒಟ್ಟು 36 ಸ್ಯಾಚೆಟ್‌ಗಳಲ್ಲಿ ಒಟ್ಟು 3.240 ಲೀಟರ್ ಮದ್ಯವಿದ್ದು ಇದರ ಅಂದಾಜು ಮೌಲ್ಯ ರೂ 1800/- ಆಗಬಹುದು. ಆರೋಪಿಯು ಯಾವುದೇ ಪರವಾನಿಗೆ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಮದ್ಯ ತುಂಬಿದ ಸ್ಯಾಚೆಟ್‌ಗಳನ್ನು ಆತನ ವಶದಲ್ಲಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದುದರಿಂದ ಆರೋಪಿ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಕಾಯರ್ತಡ್ಕ ಪಾದೆ ಮನೆ ಶಾಂತಪ್ಪ (51) ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
