Home ಶಾಲಾ ಕಾಲೇಜು ಕ್ರೈಸ್ಟ್ ಅಕಾಡೆಮಿಯಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಕಾನೂನು ಮಾಹಿತಿ ಕಾರ್ಯಾಗಾರ

ಕ್ರೈಸ್ಟ್ ಅಕಾಡೆಮಿಯಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಕಾನೂನು ಮಾಹಿತಿ ಕಾರ್ಯಾಗಾರ

17
0

ಬೆಳ್ತಂಗಡಿ; ರೋಟರಿ ಸಮುದಾಯ ದಳ ಮುಂಡಾಜೆ, ಕ್ರೈಸ್ಟ್ ಅಕಾಡೆಮಿ ಮುಂಡಾಜೆ, ಪೊಲೀಸ್ ಇಲಾಖೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಪರಾಧಗಳು, ಮಾದಕ ದ್ರವ್ಯಗಳಿಂದಾಗುವ ಅಪರಾಧಗಳು, ಹಾಗೂ ಸೈಬರ್ ಅಪರಾಧಗಳ ಬಗ್ಗೆ ಕಾನೂನು ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಸಮುದಾಯ ದಳ ಮುಂಡಾಜೆ ಇದರ ಅಧ್ಯಕ್ಷರಾದ ಪಿ.ಸಿ ಸೆಬಾಸ್ಟಿಯನ್ ಅವರು ನೆರವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಕ್ರೈಸ್ಟ್ ಅಕಾಡಮಿಯ ಪ್ರಾಂಶುಪಾಲರಾದ ಜಾರ್ಜ್ ಸಿ.ಎಂ.ಐ ಅವರು ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಆನಂದ್ ಅವರು ಆಗಮಿಸಿ ವಿವಿಧ ಕಾನೂನುಗಳ ಬಗ್ಗೆ ಹಾಗೂ ಮಾದಕ‌ ದ್ರವ್ಯಗಳ ಅಪಾಯದ ಬಗ್ಗರ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಗೌಡ, ವೆಂಕಟೇಶ್ ಕಜೆ ಮುಂಡಾಜೆ, ಬಾಬು ಪೂಜಾರಿ, ರಾಕೇಶ್ ಕೆ.ಎಸ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here