Home ಅಪರಾಧ ಲೋಕ ಉಜಿರೆ; ಅರಳಿಯಲ್ಲಿ ಮನೆಗೆ ನುಗ್ಗಿ ನಗದು ಚಿನ್ನಾಭರಣ ಕಳವು

ಉಜಿರೆ; ಅರಳಿಯಲ್ಲಿ ಮನೆಗೆ ನುಗ್ಗಿ ನಗದು ಚಿನ್ನಾಭರಣ ಕಳವು

119
0

ಉಜಿರೆ: ಇಲ್ಲಿಯ ಅರಳಿ ಬಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಯಾರೋ ಕಳ್ಳರು ಕಳ್ಳತನ ಮಾಡಿ ನಗ -ನಗದು ದೋಚಿ ಪರಾರಿಯಾದ ಘಟನೆ ಅ.9ರಂದು ನಡೆದಿದೆ.

ಬೆಟ್ಟು ಮನೆಯ ಅರಳಿ ನಿವಾಸಿ ಮಹಾಬಲ ರವರು ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದು ಈ ವೇಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆಯ ಪಕ್ಕಾಸು ತೆಗೆದು ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 10000 ನಗದು ಹಾಗೂ 50ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here