Home ಅಪಘಾತ ಬೆಳ್ತಂಗಡಿ; ನೆರಿಯದಲ್ಲಿ ಬೆಂಕಿ ಆಕಸ್ಮಿಕ ಮನೆ ಸಂಪೂರ್ಣ ಭಸ್ಮ

ಬೆಳ್ತಂಗಡಿ; ನೆರಿಯದಲ್ಲಿ ಬೆಂಕಿ ಆಕಸ್ಮಿಕ ಮನೆ ಸಂಪೂರ್ಣ ಭಸ್ಮ

35
0

ಬೆಳ್ತಂಗಡಿ; ತಾಲೂಕಿನ ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ಹರೀಶ್ ಎಂಬವರ ಮನೆಯಲ್ಲಿ ವೇಳೆ ಬೆಂಕಿ ಅನಾಹುತ ಉಂಟಾಗಿ ಮನೆಗೆ ಭಾರಿ ಹಾನಿಯಾದ ಘಟನೆ ಸೋಮವಾರ ರಾತ್ರಿಯ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ.
ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ ಹಾಗೂ ಒಬ್ಬಳು ಮಗಳು ತವರು ಮನೆಗೆ ಹೋಗಿದ್ದರು.
ಇನ್ನಿಬ್ಬರು ಮಕ್ಕಳು ಮನೆಯಲ್ಲಿ ಇದ್ದರು. ಅವರು ಸಂಜೆಯ ವೇಳೆ ಪಕ್ಕದ ಮನೆಗೆ ಹೋಗಿದ್ದರು.
ಬಳಿಕ ರಾತ್ರಿಯ ಆಗುತ್ತಿದ್ದ ಅಂತೆಯೇ ಬೆಂಕಿ ಅನಾಹುತ ಉಂಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮನೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಹಂಚಿನ ಮೇಲ್ಛಾವಣಿಯ ಮನೆ ಬಹುತೇಕ ಬೆಂಕಿಗೆ ಆಹುತಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here