


ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಸಂಬಂಧ ಎಸ್.ಐ.ಟಿ ವಿಚಾರಣೆಗೆ ಹೋರಾಟಗಾರ ಜಯಂತ್.ಟಿ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಎಸ್.ಐ.ಟಿ ಕಚೇರಿಗೆ ಅ3ರಂದು ಆಗಮಿಸಿದ್ದಾರೆ.
ಜಯಂತ್ ಟಿ ಅವರ ಮಗ ಸಾಕ್ಷಿದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯನ ವಿಡಿಯೋ ಮಾಡಿದ್ದ ಎನ್ನಲಾಗಿದ್ದು ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿರುವುದಾಗಗಿ ತಿಳಿದು ಬಂದಿತ್ತು.
ಇದೀಗ ಜಯಂತ್ ಅವರ ಪತ್ನಿ ಮಗ ಹಾಗೂ ಮಗಳು ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದಾರೆ. ಜಯಂತ್ ತನ್ನ ಬೆಂಗಳೂರಿನ ಮನೆಯಲ್ಲಿ ಚಿನ್ನಯ್ಯನಿಗೆ ಕೆಲ ದಿನ ಆಶ್ರಯ ನೀಡಿದ್ದ ಈಹಿನ್ನಲೆಯಲ್ಕಿ ಜಯಂತ್ ಮನೆ ಮೇಲೆ ರೈಡ್ ಮಾಡಲಾಗಿತ್ತು. ಇದೇ ವಿಚಾರದ ಮಾಹಿತಿ ಸಂಗ್ರಹಣೆಗಾಗಿ ಇವರನ್ನು ಎಸ್.ಐ.ಟಿ ಕರೆಸಿರುವ ಸಾಧ್ಯತೆಯಿದೆ
