Home ಸ್ಥಳೀಯ ಸಮಾಚಾರ ಧರ್ಮಸ್ಥಳದಲ್ಲಿ ಚಂಡಿಕಾಹೋಮ ಸತ್ಯದರ್ಶನಸಮಾವೇಶ; ಕ್ಷೇತ್ರದ ವಿರುದ್ದದ ಷಡ್ಯಂತ್ರ  ತನಿಖೆಯಿಂದ ಹೊರಬಂದಿದೆ. ಡಾ.ಡಿ ವೀರೇಂದ್ರ ಹೆಗ್ಗಡೆಯವರು

ಧರ್ಮಸ್ಥಳದಲ್ಲಿ ಚಂಡಿಕಾಹೋಮ ಸತ್ಯದರ್ಶನಸಮಾವೇಶ; ಕ್ಷೇತ್ರದ ವಿರುದ್ದದ ಷಡ್ಯಂತ್ರ  ತನಿಖೆಯಿಂದ ಹೊರಬಂದಿದೆ. ಡಾ.ಡಿ ವೀರೇಂದ್ರ ಹೆಗ್ಗಡೆಯವರು

46
0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ28 ರಂದು ಬೆಳ್ತಂಗಡಿ ತಾಲೂಕಿನ ಭಕ್ತರಿಂದ ಚಂಡಿಕಾ ಹೋಮ ನಡೆಯಿತು.

ಬೆಳಗ್ಗೆ 6 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಚಂಡಿಕಾ ಹೋಮ ಆರಂಭಗೊಂಡು ಸಾವಿರಾರು ಭಕ್ತರು ಭಾಗವಹಿಸಿದರು. ಬಳಿಕ ಬೆಳಗ್ಗೆ 9:30ಕ್ಕೆ ಶ್ರೀ ಧರ್ಮಸ್ಥಳದ ದ್ವಾರದಿಂದ ಯಾಗ ಮಂಟಪಕ್ಕೆ ಬೃಹತ್ ಮೆರವಣಿಗೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು
ಸರಕಾರ ಎಸ್.ಐ.ಟಿ ಮಾಡದಿದ್ದರೆ ಸತ್ಯ ಹೊರಬರುತ್ತಿರಲಿಲ್ಲ. ತನಿಖೆಯಿಂದಾಗಿ ಯಾರು ಯಾರು ಅದರ ಹಿಂದೆ ಇದ್ದಾರೆ ಷಡ್ಯಂತ್ರ ಮಾಡಿದ್ದಾರೆ ಎಂದು ಗೊತ್ತಾಗಿದೆ. ಕ್ಷೇತ್ರವನ್ನು ಹೇಗಾದರೂ ಮುಗಿಸಬೇಕು ಎಂದು ಷಡ್ಯಂತ್ರ ಮಾಡುವುದು ನಿಜವಾಗಿ ಅಪಾಯಕಾರಿ ಬೆಳವಣಿಗೆಯಾಗಿದೆ. ಕ್ಷೇತ್ರಕ್ಕೆ ಭಕ್ತರು ಬರಬಾರದು ಎಂದು ನಿಲ್ಲಿಸಲು ಮನುಷ್ಯನಿಂದ ಸಾಧ್ಯವಿಲ್ಲ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನಿರ್ಧರಿಸಬೇಕು. ಭಕ್ತರು ಬರುವುದು ಸೇವೆ ಸಲ್ಲಿಸುವುದು ಅವರವರ ಭಕ್ತಿಯಿಂದ
ದೋಷಾರೋಪಣೆ ಮಾಡಿ ಷಡ್ಯಂತ್ರ ರೂಪಿಸಿ ಅದನ್ನು ತಡೆಯಲು ಸಾಧ್ಯವಿಲ್ಲ.
ಚಿನ್ನವನ್ನು ಬೆಂಕಿಗೆ ಹಾಕಿದಂತೆ ಧರ್ಮಸ್ಥಳ ಬೆಂಕಿಗೆ ಬಿದ್ದು ಮತ್ತಷ್ಟು ಪ್ರಜ್ವಲಿಸಿದೆ. ಕ್ಷೇತ್ರದಿಂದ ಮತ್ತಷ್ಟು ಸದ್ಕಾರ್ಯಗಳನ್ನು ಮಾಡಲು ಸಿದ್ದತೆ ನಡೆಯುತ್ತಿದೆ ಅದನ್ನು ಮುಂದೆ ತಿಳಿಸುತ್ತೇವೆ.
ಸದ್ಕಾರ್ಯಗಳು ಇನ್ನಷ್ಟು ಮುಂದುವರಿಯಲಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೇಹನ್ ಆಳ್ವ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಸಂಚಾಲಕರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಮೋಹನ್ ಕುಮಾರ್ ಸಹಿತ ಪ್ರಮುಖರು ಭಾಗವಹಿಸಿದರು.

LEAVE A REPLY

Please enter your comment!
Please enter your name here