Home ಸ್ಥಳೀಯ ಸಮಾಚಾರ ಸಹಕಾರ ಸಂಘಗಳು ರೈತಪರವಾಗಿ ಕಾರ್ಯನಿರ್ವಹಿಸಲಿ; ಹರಿದಾಸ್

ಸಹಕಾರ ಸಂಘಗಳು ರೈತಪರವಾಗಿ ಕಾರ್ಯನಿರ್ವಹಿಸಲಿ; ಹರಿದಾಸ್

46
0

ಸಹಕಾರ ಸಂಘಗಳು ಕೇವಲ ಹಣಕಾಸು ವ್ಯವಹಾರ ನಡೆಸದೆ ರೈತಪರ ಕಾರ್ಯಚಟುವಟಿಕೆಗಳನ್ನು ನಡೆಸಿದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ರಂಗಕ್ಕೆ ವಿಶೇಷ ಕೊಡುಗೆ ನೀಡಬಹುದು ಎಂದು ಹಿರಿಯ ಸಹಕಾರಿ , ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಇದರ ಅಧ್ಯಕ್ಷ ಹರಿದಾಸ್ ಎಸ್. ಎಂ ಹೇಳಿದರು.

ಬೆಳ್ತಂಗಡಿ ಅನನ್ಯ ಸಭಾಂಗಣದಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮತ್ತು ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಸಂಘ ಇದರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು‌.

ದೇಶದ ಜೀವನಾಡಿ ರೈತರು ಸಂಕಷ್ಟದಲ್ಲಿರುವಾಗ ರೈತಪರ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ರೈತರ ಜೊತೆಗೆ ಸಹಕಾರ ಸಂಘಗಳು ಜೀವಂತವಾಗಿರಲು ಸಾಧ್ಯವಿದೆ ಎಂದರು. ನಮ್ಮ ಎರಡೂ ಸಹಕಾರ ಸಂಘದ ಅಭಿವೃದ್ಧಿಯಲ್ಲಿ ತಾಲೂಕಿನ ರೈತ , ದುಡಿಯುವ ವರ್ಗದ ಜನರು ವಿಶೇಷ ರೀತಿಯ ಕೊಡುಗೆ ನೀಡಿದ್ದಾರೆ ಎಂದ ಅವರು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಸಹಕಾರ ಸಂಘವು 18 ಲಕ್ಷ ಲಾಭ ಗಳಿಸಿದ್ದು , ಸದಸ್ಯರಿಗೆ 8% ಲಾಭಾಂಶ ನೀಡಲಿದೆ. ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಸಂಘವು 15 ಲಕ್ಷ ಲಾಭ ಗಳಿಸಿದ್ದು , ಸದಸ್ಯರಿಗೆ 10% ಲಾಭಾಂಶ ನೀಡಲಿದೆ ಎಂದರು.

ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ಪ್ರಭಾಕರ್ ಮಯ್ಯ ಮಾತನಾಡಿ ರೈತರು ಕೇವಲ ಒಂದು ಕೃಷಿಯನ್ನು ಅವಲಂಬಿಸದೆ ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡಿದರೆ ಉತ್ತಮ ಇಳುವರಿ ಜೊತೆಗೆ ಲಾಭ ಗಳಿಸಬಹುದು ಎಂದ ಅವರು ರೈತರು ಸಾವಯವ ಕೃಷಿಯತ್ತ ಗಮನ ಹರಿಸಿದರೆ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಎಂದರು. ಕೃಷಿ ಚಟುವಟಿಕೆಗಳನ್ನು ನಡೆಸಲು ಎಕರೆಗಟ್ಟಲೆ ಜಮೀನಿನ ಅವಶ್ಯಕತೆ ಇಲ್ಲ , ಮನೆಯಂಗಳದಲ್ಲೂ ಉತ್ತಮ ರೀತಿಯಲ್ಲಿ ಸಾವಯವ ಕೃಷಿ ನಡೆಸಬಹುದು ಎಂದರು.

ಸಭೆಯನ್ನು ಉದ್ದೇಶಿಸಿ ಹಿರಿಯ ಸಹಕಾರಿ , ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು , ಹಿರಿಯ ಸಹಕಾರಿಗಳಾದ ದುಗ್ಗಪ್ಪ ಗೌಡ ಕರಾಯ , ಅಶೋಕ್ ಶೆಟ್ಟಿ , ರೈತ ಸಂಘದ ಮುಖಂಡ ಸುರೇಶ್ ಭಟ್ ಕೊಜಂಬೆ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಹಕಾರಿಗಳಾದ ಪ್ರೋ. ವೆಂಕಪ್ಪ ಗೌಡ ಸುಳ್ಯ , ಸುಧಾಕರ ಪೂಜಾರಿ , ನಿರ್ದೇಶಕರಾದ ಶಿವಕುಮಾರ್ ಎಸ್. ಎಂ , ವೆಂಕಟೇಶ್ ಮಯ್ಯ , ರವೀಂದ್ರ ಚಂಡ್ತಿಮಾರ್ , ಸುಕನ್ಯಾ ಹೆಚ್ , ಮನೋಹರ ನಿಡ್ಲೆ , ಸುಜೀತ್ ಉಜಿರೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಅರ್ಹರಿಗೆ ಉಚಿತ ದಿತ್ಯೊಪಯೋಗಿ ಪಾತ್ರೆಗಳ ಕಿಟ್ ಮತ್ತು ಟರ್ಪಾಲ್ ವಿತರಣೆ ಮಾಡಲಾಯಿತು. ಸಹಕಾರ ಸಂಘದ ಸಿಬ್ಬಂದಿಗಳಾದ ವೈಜಯಂತಿ , ಸಂಜೀವ ಆರ್ , ಕೀರ್ತನಾ , ಶ್ರಾವ್ಯ , ಸವಿತಾ , ರಮೇಶ್ ಭಂಡಾರ್ಕರ್ ಸಹಕರಿಸಿದರು.

LEAVE A REPLY

Please enter your comment!
Please enter your name here