


ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ ವಜಚಾರಣೆಯನ್ನು ಎಸ್.ಐ.ಟಿ ತಂಡ ನಡೆಸುತ್ತಿದ್ದು ಸೆ 13ರಂದು ವಿಚಾರಣೆಗಾಗಿ ಗಿರಿಶ್ ಮಟ್ಟಣ್ಣನವರ್ ಹಾಗೂ ಪ್ರದೀಪ್ ಹಾಗೂ ಜಯಂತ್.ಟಿ ಎಸ್.ಐ.ಟಿ ಕಚೇರಿಗೆ ಬಂದಿದ್ದಾರೆ.
ಸೆ.12 ರಂದು ಪ್ರದೀಪ ನನ್ನು ನ್ಯಾಯಾಲಾಯಕ್ಕೆ ಕರೆದೊಯ್ದು ಆತನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿತ್ತು. ಮುಚ್ಚಿ ಕೊಠಡಿಯಲ್ಲಿ ಪ್ರದೀಪನ ಹೇಳಿಕೆ ದಾಖಲಿಸಲಾಗಿತ್ತು.
ಬಳಿಕ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು ಈ ಹಿನ್ನಲೆಯಲ್ಲಿ ಪ್ರದೀಪ್ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಆತನೊಂದಿಗೆ ಗಿರೀಶ್ ಮಟ್ಟಣ್ಣನವರ್ ಹಾಗೂ ಜಯಂತ್.ಟಿ ಅವರು ಕೂಡಾ ವಿಚಾರಣೆಗೆ ಹಾಜರಾಗಿದ್ದಾರೆ.
