


ಬೆಳ್ತಂಗಡಿ :ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧ ಪಟ್ಂತೆ ಎಸ್.ಐ.ಟಿ ಕಚೇರಿಗೆ ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ ಮತ್ತೆ ವಿಚಾರಣೆಗೆ ಸೆ.7 ರಂದು ವಿಚಾರಣೆಗೆ ಹಾಜರಾಗಿದ್ದಾರೆ. ಜಯಂತ್.ಟಿ ನಾಲ್ಕನೇ ದಿನ ವಿಚಾರಣೆಗೆ ಹಾಜರಾಗುತ್ತಿದ್ದು. ಗಿರೀಶ್ ಮಟ್ಟಣ್ಣವರ್ ಮೂರನೇ ದಿನದ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಶನಿವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟದಲ್ಲಿ ತಲೆ ಬುರುಡೆ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ವಿಠಲ ಗೌಡ ನನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಲಾಗಿತ್ತು. ತಲೆ ಬುರುಡೆಯನ್ನು ನೋಡಿ ಮಾಹಿತಿ ನೀಡಿದ್ದು ವಿಠಲ ಗೌಡ ಎನ್ನಲಾಗಿದ್ದು ಈ ಬಗ್ಗೆ ವಿಚಾರಣೆ ಭಾನುವಾರವೂ ನಡೆಯುತ್ತಿದೆ. ಈ ತಲೆಬುರುಡೆಯನ್ನು ತರುವಲ್ಲಿ ಇವರ ಪಾತ್ರದ ಬಗ್ಗೆ ಜಯಂತ್ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರ ವಿಚಾರಣೆ ನಡೆಯುತ್ತಿದೆ.
ಅದೇರಿಈತಿ ಎರಡನೆಯ ದೂರುದಾರನಾಗಿ ಎಸ್.ಐ.ಟಿ ಗೆ ಬಂದಿದ್ದ ಜಯಂತ್ ಅವರು ತಾನು ಮೃತದೇಹವನ್ನು ಹೂತು ಹಾಕುವುದನ್ನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದು ಈ ಬಗ್ಗೆಯೂ ಜಯಂತ್ ಅವರ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ಈಗ ನಡೆಯುತ್ತಿರುವ ತಲೆಬುರುಡೆ ಪ್ರಕರಣದ ತನಿಖೆಯ ಬಳಿಕ ಇತರ ವಿಚಾರಗಳ ಬಗ್ಗೆ ತನಿಖೆಗೆ ಎಸ್.ಐ.ಟಿ ತಂಡ ಮುಂದಾಗುವ ಸಾಧ್ಯತೆಯಿದೆ.
