


ಬೆಳ್ತಂಗಡಿ; ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿ ಸದಾಶಿವ ಯಾನೆ ಸುಜಿತ್ ಎಂಬಾತನಾಗಿದ್ದಾನೆ. ಮಂಗಳೂರಿನ ಪಡೀಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆತಗ ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸೆ.5ರಂದು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಸೆ.6 ರಂದು ಅಪರಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಏನಿದು ಪ್ರಕರಣ
ಬೆಳಾಲು ಸೇವಾ ಸಹಕಾರಿ ಬ್ಯಂಕಿನಲ್ಲಿ ಬೆಳಾಲು ನಿವಾಸಿ ಎಲ್ಯಣ್ಣ ಪೂಜಾರಿ ಮಗ ಪ್ರಕಾಶ್ ಎಂಬಾತ 10 ಲಕ್ಷ ರೂಪಾಯಿ ಹಣ ಮೂರು ವರ್ಷದ ಅವಧಿಗೆ ಸಂಘದಲ್ಲಿ ಠೇವಣಿ ಇರಿಸಿ ಆ ದಿನದಂದು ಠೇವಣಿ ಆಧಾರದಲ್ಲಿ ಮೂರು ಲಕ್ಷದ ಐವತ್ತು ಸಾವಿರ (3,50,000) ರೂಪಾಯಿ ಹಣ ಸಾಲವಾಗಿ ಪಡೆದುಕೊಂಡಿದ್ದ. 28-04-2025 ರಂದು ಒಂದು ಸುಳ್ಳು ಅರ್ಜಿ ಸಂಘಕ್ಕೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಪೂರ್ತಿ ಠೇವಣಿ 10 ಲಕ್ಷ ರೂಪಾಯಿ ಬಡ್ಡಿ ಸಹಿತ ನನಗೆ ಮರು ಪಾವತಿಸುವಂತೆ ಕೋರಿ ಅರ್ಜಿ ಸಲ್ಲಸಿದ್ದ. ನಿಜ ವಿಚಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿ ಹೇಳಿದರೂ ಪ್ರಕಾಶ ಕೇಳದೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಲ್ಲದೆ ನಂತರ ಪದೆ ಪದೆ ಸಂಘದ ಕಚೇರಿಗೆ ಬಂದು ಸಿಬ್ಬಂದಿಗಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಎಂದು ಸಂಘದ ಅಧ್ಯಕ್ಷರಾದ ಪದ್ಮಗೌಡ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.31 ರಂದು ಸದಾಶಿವ.ಓ@ಸುಜಿತ್, ಪ್ರಶಾಂತ.ಬಿ, ಪ್ರಕಾಶ್ ವಿರುದ್ಧ ಕಲಂ -314,316(4),318(3),336(3),306,352,351(2),R/W 3(5) BNS 2023 ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಇದರ ಬ ಇಬ್ಬರು ಸಿಬ್ಬಂದಿ ಸದಾಶಿವ @ ಸುಜಿತ್ ಮತ್ತು ಪ್ರಶಾಂತ್ ನನ್ನು ಮೇ ತಿಂಗಳಲ್ಲಿ ‘ವರೆಗೆ ಅಮಾನತು ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಸುಜಿತ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ
