Home ಸ್ಥಳೀಯ ಸಮಾಚಾರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸೌಜನ್ಯ ತಾಯಿ ಕುಸುಮಾವತಿ ಅವರಿಂದ ದೂರು; ಪ್ರಕರಣ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸೌಜನ್ಯ ತಾಯಿ ಕುಸುಮಾವತಿ ಅವರಿಂದ ದೂರು; ಪ್ರಕರಣ ದಾಖಲು

36
0

ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯ ಪರ ಹೋರಟಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ಬರಹಗಳನ್ನು ಮಾನಹಾನಿಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ದ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್ ಗಳ ವಿರುದ್ದ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ , ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜಪೆ, ಅಮಿತ್ ಬಜಪೆ, ಅನು‌ಶೆಟ್ಟಿ, ನವೀನ್ ಗೌಡ, ಜೈ ಕುಂಜ್ಞಪ್ಪ, ವೈ. ಎಂ.ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್ಕ್, ಇನ್ಸ್ಟ್ರಾ ಗ್ರಾಮ್ ಅಕೌಂಟ್ ಟ್ರೋಲ್ ತಿಮ್ಮರೌಡಿ, ಶೆಟ್ಟಿ ತನುಷ್ ಈ ಖಾತೆಗಳ ವಿರುದ್ದ ದೂರು ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ.4 ರಂದು ಕುಸುಮಾವತಿ ನೀಡಿದ ದೂರಿನ ಮೇರೆಗೆ BNS-2023(u/s-79,296) ಅಡಿಯಲ್ಲಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಸರಾಂಶ:
ಈ ಪ್ರಕರಣದ ದೂರುದಾರರಾದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿರುವ ಕುಸುಮಾವತಿಯವರು ಕಳೆದ 13 ವರ್ಷಗಳಿಂದ ತನ್ನ ಮಗಳಾದ ಕು.ಸೌಜನ್ಯ ಸಾವಿನ ಬಗ್ಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಅಪಾದಿತರು ನಿರಂತರವಾಗಿ ಕುಸುಮಾವತಿ ಹಾಗೂ ಇವರ ಜೊತೆ ನ್ಯಾಯಪರ ಹೋರಾಟದಲ್ಲಿ ತೊಡಗಿಕೊಂಡಿದ್ದ ಸೌಜನ್ಯ ಪರ ಹೋರಾಟಗಾರರ ಪೊಟೋಗಳನ್ನು ಮಾರ್ಪ್ ಮಾಡಿ ಸದ್ರಿ ಪೊಟೋಗಳನ್ನು ಹಾಗೂ ಆಶ್ಲೀಲವಾದ ಬರಹಗಳರು ಪೋಸ್ಟ್ ಗಳನ್ನು ಸಾರ್ವಜನಿಕವಾಗಿ ಹರಿಯಬಿಟ್ಟು ಕುಸುಮಾವತಿ ಹಾಗೂ ಇವರ ಜೊತೆ ಇರುವ ಸೌಜನ್ಯ ನ್ಯಾಯ ಪರ ಹೋರಾಟಗಾರರಿಗೆ ಸಾರ್ವಜನಿಕವಾಗಿ ಕಿರಿಕಿರಿಯುಂಟಾಗುವಂತೆ ಮಾಡಿದ್ದಲ್ಲದೆ ಮಾನಕ್ಕೆ ಹಾನಿಯಾಗುವ ರೀತಿಯಲಿ ವಿದ್ಯುನ್ಮಾನ ಸಾಧನದ ಮೂಲಕ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಹಾಗೂ ಇನ್ಟ್ರಾಗ್ರಾಂ ನಲ್ಲಿ ದಿನಾಂಕ 01.08.2024 ರಿಂದ 03.09.2025 ರ ಮಧ್ಯದ ಅವಧಿಯಲ್ಲಿ ನಿರಂತರವಾಗಿ ಹರಿಯಟ್ಟಿರುವುದನ್ನು ದೂರುದಾರರು ಬೆಳ್ತಂಗಡಿ ತಾಲೂಕು ಬೆಳ್ತಂಗಡಿನಲ್ಲಿರುವಾಗ ತನ್ನ ತಮ್ಮ ಪುರಂದರ ಗೌಡ ರವರ ಮೊಬೈಲ್ ನಲ್ಲಿ ನೋಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here