


ಬೆಳ್ತಂಗಡಿ : ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಸಮಾವೇಶ ‘ ಸೆ. 7 ರಂದು ಸಂಜೆ ಗಂಟೆ 4 ರಿಂದ 6.30 ರವರೆಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಉತ್ತರ ಇದರ ಅಧ್ಯಕ್ಷ ಸಿ.ಎ. ಮುಹಮ್ಮದ್ ಇಸಾಕ್ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ಮಂಗಳೂರು ಬರಕ ಇಂಟರ್ ನ್ಯಾಶನಲ್ ಸ್ಕೂಲ್ & ಕಾಲೇಜಿನ ಪ್ರಾಂಶುಪಾಲ ಜನಾಬ್ ಶರ್ಫುದ್ದೀನ್ ಬಿ.ಎಸ್. ಅಧ್ಯಕ್ಷತೆಯಲ್ಲಿ
ಧಾರ್ಮಿಕ ಸೌಹಾರ್ದ : ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದಲ್ಲಿ ಸಮಾವೇಶ ನಡೆಯಲಿದ್ದು, ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯರವರು ಉದ್ಘಾಟಿಸಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಕೆ. ಹರಿಪ್ರಸಾದ್, ಕೆ. ಪ್ರತಾಪ್ ಸಿಂಹ ನಾಯಕ್, ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್ ರಾಜ್ ಮೌರ್ಯ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭಾಗವಹಿಸಲಿದ್ದಾರೆ. ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞಿ ದಿಕ್ಸೂಚಿ ಭಾಷಣ ಮಾಡಲಿದ್ದು, ಇತರ ಹಲವು ಗಣ್ಯರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಸಮಾವೇಶ ಸಂಚಾಲಕ ಅಮೀನ್ ಅಹ್ಸನ್ ಮಾತನಾಡಿ, ‘ಅಪರಾಹ್ನ ಗಂಟೆ 2.30 ಕ್ಕೆ ಸರಿಯಾಗಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿಯಿಂದ ಮಂಜುನಾಥ ಸ್ವಾಮಿ ಕಲಾ ಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದ್ದು ಜಾಥಾ ಹಾಗೂ ಸಮಾವೇಶದಲ್ಲಿ ಎಲ್ಲಾ ಧರ್ಮಿಯರು ಭಾಗವಹಿಸಲಿದ್ದಾರೆ. ಪ್ರವಾದಿ ಮುಹಮ್ಮದ್ ರ ಸೀರತ್ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್ ಯು, ಜಿಲ್ಲಾ ಸಂಚಾಲಕಿ ಸಾಜಿದಾ ಮೂಮಿನ್, ಎಸ್.ಐ.ಒ .ಜಿಲ್ಲಾಧ್ಯಕ್ಷ ರಿಜ್ವಾನ್ ಅಝರಿ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನ ಜಿಲ್ಲಾಧ್ಯಕ್ಷ ಯುಸೂಫ್ ಅಸ್ಲಾಂ ಇದ್ದರು.
