


ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2024-25 ನೇ ಸಾಲಿನ 16 ನೇ ವಾರ್ಷಿಕ ಮಹಾಸಭೆ ಆಗಸ್ಟ್ 23 ರಂದು ಲ್ಯಾಲ ಜ್ಯೋತಿ ಹಾಸ್ಪಿಟಲ್ ಬಳಿ ಇರುವ ಸಂಗಮ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ.ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು. 2024-25 ನೇ ಸಾಲಿನಲ್ಲಿ ರೂ 164 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ 72.70ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಶ್ರೀ. ಜಾರ್ಜ್ ಎಮ್. ವಿ ರವರು ಸ್ವಾಗತಿಸಿದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ 2024-25 ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು.

ನಿರ್ದೇಶಕರುಗಳಾದ ಸೆಭಾಸ್ಟೀನ್ ವಿ.ಟಿ, ಜ್ಯೆಸನ್ ಪಟ್ಟೇರಿಲ್, ಅಂದಾನಿ ಕೆ.ಡಿ, ಬಾಬು ತೋಮಸ್, ಬಿಜು ಪಿ.ಪಿ, ಬಿಜು ಎಮ್.ಜೆ, ಸೆಭಾಸ್ಟೀನ್, ಸೋಪಿ ಜೋಸೆಫ್, ಫಿಲೋಮಿನಾ ವಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಮತ್ತು ಕಡಬ ತಾಲೂಕಿನಲ್ಲಿರುವ ನಮ್ಮ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಸಂಘದ ಅಭಿನಂದಿಸಲಾಯಿತ್ತು. ಅದೇ ರೀತಿ ನಮ್ಮ ಸಂಘದ ಸದಸ್ಯರುಗಳಾಗಿದ ಮಾಜಿ ಸೈನಿಕರನ್ನ ಗುರುತಿಸಿ ಸನ್ಮಾನಿಸಲಾಯಿತು.
ನಿರ್ದೇಶಕ ಸೆಭಾಸ್ಟೀನ್ ಬಂಗಾಡಿ ಯವರು ವಂದಿಸಿ, ಕಾರ್ಯಕ್ರಮಗಳನ್ನು ಯಶ್ವಸಿಯಾಗಿ ನಡೆಸಲು ಸಿಬ್ಬಂದಿ ವರ್ಗದವರು ಸಹಕರಿಸಿದರು. ಶಾಖಾ ವ್ಯವಸ್ಥಾಪಕರಾದ ಸುಜಾ ಜೇಮ್ಸ್ & ರೇಷ್ಮಾ ಅಬ್ರಾಹಂ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

