Home ಬ್ರೇಕಿಂಗ್‌ ನ್ಯೂಸ್ ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್ “ಯೂಟ್ಯೂಬ್ ಚಾನೆಲ್ ನವರು ನನ್ನನ್ನು ಬೆದರಿಸಿ ಹೇಳಿಕೆ ಪಡೆದುಕೊಂಡರು”...

ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್ “ಯೂಟ್ಯೂಬ್ ಚಾನೆಲ್ ನವರು ನನ್ನನ್ನು ಬೆದರಿಸಿ ಹೇಳಿಕೆ ಪಡೆದುಕೊಂಡರು” ಆರೋಪ

0
13

ಬೆಂಗಳೂರು: ಅನನ್ಯಾ ಭಟ್ ನನ್ನ ಮಗಳೇ. ನನಗೆ ಮಗಳು ಇದ್ದಳು. ನಾನು ಅದನ್ನು SIT ಮುಂದೆ ಪ್ರೂವ್ ಮಾಡುತ್ತೇನೆ ಎಂದು ಸುಜಾತಾ ಭಟ್ ಮತ್ತೆ ಉಲ್ಟಾ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಸಂಜೆ Insight Rush ಎನ್ನುವ ಯೂಟ್ಯೂಬ್
ಚಾನೆಲ್ ನಲ್ಲಿ ಸುಜಾತಾ ಭಟ್ ಹೇಳಿರುವ ಅನನ್ಯಾ ಭಟ್ ನಾಪತ್ತೆ ಕಥೆ ಫೇಕ್ ಎಂದು ಸುದ್ದಿ ಪ್ರಸಾರವಾಗಿತ್ತು. ಅದರಲ್ಲಿ 2003 ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತೊರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್, ಅವರು ನನಗೆ ಅನನ್ಯಾ ಭಟ್ ಎನ್ನುವ ಮಗಳೇ ಇಲ್ಲ. ಅದೆಲ್ಲವೂ ಫೇಕ್ ಎಂದು ತಪ್ರೊಪ್ಪಿಗೆ ನೀಡಿ ಕ್ಷಮೆ ಕೇಳಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯದಲ್ಲಿ ಸಂಚಲನ ಮೂಡಿತ್ತು.

ಆದರೆ ಬೆಂಗಳೂರಿನ ತಮ್ಮ ಮನೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸುಜಾತಾ ಭಟ್, ಅನನ್ಯಾ ಭಟ್ ನನ್ನ ಮಗಳೇ. ನಾನು ಅದನ್ನು SIT ಮುಂದೆ ಪ್ರೂವ್ ಮಾಡುತ್ತೇನೆ. ಯಾರೋ ಒಬ್ಬ ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಕಾರಿನಲ್ಲಿ ಕೂರಿಸಿದರು. ಯೂಟ್ಯೂಬ್ ಚಾನೆಲ್ ನವರು ಬೆದರಿಸಿ ನನ್ನಿಂದ ಆ ಹೇಳಿಕೆ ಪಡೆದುಕೊಂಡರು. ನಾನು ಅದರಲ್ಲಿ ಹೇಳಿದ್ದು ಸುಳ್ಳು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಅವರ ಹೆಸರುಗಳನ್ನು ಹೇಳುವಂತೆ ಒತ್ತಡ ಹಾಕಲಾಗಿತ್ತು. ಭಯದಿಂದ ನಾನು ಹಾಗೆ ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾಗದ ವಿಚಾರವಾಗಿ ನಾನು ಮಾತನಾಡುತ್ತೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸುಜಾತಾ ಭಟ್ ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಸುಜಾತಾ ಭಟ್ ಹೇಳಿಕೆಗಳು ದಿನದಿಂದ ದಿಮಕ್ಕೆ ಹೊಸ ಗೊಂದಲಗಳಿಗೆ ಕಾರಣವಾಗುತ್ತಿದೆ. ಈಕೆ ನೀಡುತ್ತಿರುವ ಹೇಳಿಕೆಗಳ ಸತ್ಯಾ ಸತ್ಯತೆಗಳು ಎಸ್.ಐ.ಟಿ ತನಿಖೆಯಿಂದಷ್ಟೆ ಬಹಿರಂಗಗೊಳ್ಳಬೇಕಾಗಿದೆ.

NO COMMENTS

LEAVE A REPLY

Please enter your comment!
Please enter your name here