Home ಅಪರಾಧ ಲೋಕ ಬೆಳ್ತಂಗಡಿ : ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಗಣಿ ಇಲಾಖೆ ದಾಳಿ; ಎರಡು ಹಿಟಾಚಿ,ಒಂದು ಟಿಪ್ಪರ್,...

ಬೆಳ್ತಂಗಡಿ : ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಗಣಿ ಇಲಾಖೆ ದಾಳಿ; ಎರಡು ಹಿಟಾಚಿ,ಒಂದು ಟಿಪ್ಪರ್, ಟಾಕ್ಟರ್ ವಶಕ್ಕೆ: ಪ್ರಕರಣ ದಾಖಲು

82
0

ಬೆಳ್ತಂಗಡಿ : ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಅನುಮತಿ ಪಡೆದು ನದಿ ಪರಂಬೋಕು ಸೇರಿದಂತೆ ಸರಕಾರಿ ಜಾಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಬೋಬನ್
ಎಂಬವರ ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದು ನದಿಯ ಪರಂಬೋಕು ಜಾಗದಲ್ಲಿ ಮುಂಡಾಜೆ ನಿವಾಸಿ ಜಾನ್ ಎಂಬವರ ಮಗ ಪವನ್ ಎಂಬಾತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.18 ಕ್ಕೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಸುಧಾ ನೇತೃತ್ವದಲ್ಲಿ ಬೆಳ್ತಂಗಡಿ ಕಂದಾಯ ಇಲಾಖೆ ಮತ್ತು ಭೂಮಾಫನ ಹಾಗೂ ಧರ್ಮಸ್ಥಳ ಪೊಲೀಸರ ಸರಕಾರದಲ್ಲಿ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಕಲ್ಲು ಗಣಿಗಾರಿಕೆಗೆ ಉಪಯೋಗಿಸುತ್ತಿದ್ದ ಎರಡು ಹಿಟಾಚಿ , ಒಂದು ಟಿಪ್ಪರ್ , ಒಂದು ಟಾಕ್ಟರ್ ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here