

ಬೆಳ್ತಂಗಡಿ : ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಸಂಜಯ್ ನಗರ ಜಂಕ್ಷನ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖಿಳ್ರ್ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಬಿ.ಶೇಖುಂಞ್ಞ, ಮೆಹಬೂಬ್ ಸಂಜಯ ನಗರ ಆಗಮಿಸಿದ್ದರು. 2025 ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಹನೀಫ್ ವರ್ಷಾ, ಜೊತೆ ಕಾರ್ಯದರ್ಶಿ ಮಹಮ್ಮದ್, ಉಪಾಧ್ಯಕ್ಷರಾದ ಇಸ್ಮಾಯಿಲ್, ಕೋಶಾಧಿಕಾರಿಯಾದ ರಿಜ್ವಾನ್ ಬಿ.ಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಶೀದ್ ಬೆಳ್ತಂಗಡಿ, ಅಬ್ಬಾಸ್ ಸಂಜಯನಗರ, ಶೈರೋಝ್ ಉದಯನಗರ, ಅಸ್ಗರ್ ಸೌದಿ ಅರೇಬಿಯಾ, ಊರಿನ ಹಿರಿಯರು ನಾಗರೀಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.



ಕಾರ್ಯಕ್ರಮದ ನಿರೂಪಣೆಯನ್ನು ರಶೀದ್ ಬೆಳ್ತಂಗಡಿ ಮಾಡಿದರು. ಕಾರ್ಯದರ್ಶಿಗಳಾದ ಹನೀಫ್ ವರ್ಷಾ ಸ್ವಾಗತಿಸಿ, ಅಬ್ಬಾಸ್ ಸಂಜಯನಗರ ಧನ್ಯವಾದಗೈದರು.

