


ಬೆಳ್ತಂಗಡಿ: ಹಾಡು ಹಗಲೇ ಮನೆಯೊಂದರ ಬಾಗಿಲ ಬೀಗವನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿ ಇರಿಸಲಾಗಿದ್ದ 1.30 ರೂ. ಲಕ್ಷದ ಚಿನ್ನಾಭರಣ ಕಳವುಗೈದ ಘಟನೆ ಆ.12ರಂದು ತೋಟತ್ತಾಡಿಯಲ್ಲಿ ನಡೆದಿದೆ. ತೋಟತ್ತಾಡಿ ಗ್ರಾಮದ ವೆನ್ನಾಯಿಲ್ ಮನೆ ನಿವಾಸಿ ಕುಂಞಿ ಕೃಷ್ಣನ್ ಎಂಬವರ ಪುತ್ರ ನಿಧೀಶ್ ವಿ.ಕೆ. ಎಂಬವರ ದೂರಿನಂತೆ ಮನೆಯಲ್ಲಿ ತಂದೆ ಕುಂಞಿ ಕೃಷ್ಣನ್
ಒಬ್ಬರೇ ಇದ್ದು, ಆ.12 ರಂದು ಬೆಳಿಗ್ಗೆ 9 ಗಂಟೆಗೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ 1ಗಂಟೆಯ ಸುಮಾರಿಗೆ ಊಟಕ್ಕೆಂದು ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದಿರುವುದು,ಹಾಗೂ ಕಪಾಟಿನಲ್ಲಿದ್ದ ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಕೂಡಲೇ ಅವರು ಮಂಗಳೂರಿನಲ್ಲಿದ್ದ
ಪುತ್ರ ನಿಧೀಶ್ ಗೆ ತಿಳಿಸಿದರು.
ಈ ಬಗ್ಗೆ ನಿಧೀಶ್ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
