Home ಬ್ರೇಕಿಂಗ್‌ ನ್ಯೂಸ್ ಮೃತದೇಹಗಳನ್ನು ಹೂತಿಟ್ಟ ಪ್ರಕರಣ; ಎಸ್.ಐ.ಟಿ ತಂಡ ಮಂಗಳೂರಿಗೆ ಆಗಮನ

ಮೃತದೇಹಗಳನ್ನು ಹೂತಿಟ್ಟ ಪ್ರಕರಣ; ಎಸ್.ಐ.ಟಿ ತಂಡ ಮಂಗಳೂರಿಗೆ ಆಗಮನ

0
12

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ತನಿಖೆಗಾಗಿ ಜುಲೈ 25 ರಂದು ಸಂಜೆ ಮಂಗಳೂರು ಐಬಿಗೆ ಎಸ್.ಐ.ಟಿ ಅಧಿಕಾರಿಗಳು ಆಗಮಿಸಿದ್ದು ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ ಐಪಿಎಸ್ ಅನುಚೇತ್ ನೇರವಾಗಿ ಎಸ್.ಐ.ಟಿ ಇತರ ಅಧಿಕಾರಿಗಳಿದ್ದ ಮಂಗಳೂರು ಐಬಿಗೆ ತೆರಳಿದ್ದು ಅಲ್ಲಿ ಇತರ ಎಸ್.ಐ.ಟಿ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ ಪ್ರಕರಣದ ಈ ವರೆಗಿನ ಬೆಳವಣಿಗೆಗಳ ಬಗ್ಗೆ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿ ಅದರ ಬಗ್ಗೆ ಚರ್ಚಿಸಿದ ಬಳಿಕ ಮುಂದಿನ ತನಿಖೆಯ ಬಗ್ಗೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here