Home ಅಪರಾಧ ಲೋಕ ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳವು

ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳವು

0
4

ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ನಿಲ್ಲಿಸಿಹೋಗಿದ್ದ ದ್ವಿಚಕ್ರವಾಹನವನ್ನು ಕಳವುಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.
ನಿಡ್ಲೆ ಗ್ರಾಮದ ನಿವಾಸಿ ಆಶಾ ಎಂಬವರು ಜು.10ರಂದು ಧರ್ಮಸ್ಥಳ ಗೇಟ್ ಸಮೀಪ ತನ್ನ ದ್ವಿಚಕ್ರವಾಹನ ಕೆ.21ಎಕ್ಸ್ 7375 ನಂಬರ್ ನ ಹೋಂಡಾ ಡಿಯೋ ವಾಹನವನ್ನು ಬಿಟ್ಟು ಕೆಲಸಕ್ಕೆಂದು ಉಜಿರೆಗೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿ ಬಂದು ನೋಡಿದಾಗ ನಿಲ್ಲಿಸಿದ್ದ ವಾಹನ ಅಲ್ ಇರಲಿಲ್ಲ ಸ್ಥಳೀಯ ವಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಗದ ಕಾರಣ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here