

ಬೆಳ್ತಂಗಡಿ; ತಾಲೂಕಿನ ಹೊಸಂಗಡಿ ಹಾಗೂ ಗರ್ಡಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯಮಾರಾಟ ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿದ್ದು ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಗರ್ಡಾಡಿ ಗ್ರಾಮದ ಡಂಜೋಳಿ ಕ್ರಾಸ್ ಸಮೀಪ ಇರುವ ಗರ್ಡಾಡಿ ಕೋಳಿ ಫಾರ್ಮ್ಸ್ ಎಂಬಲ್ಲಿ ಅಕ್ರಮ ಮದ್ಯ ಮಾರಾ ಮಾಡುತ್ತಿರುವ ಬಂದ ಮಾಹಿತಿಯ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಇಲ್ಲಿಂದ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಮದ್ಯದ ಬಾಟ್ಲಿಗಳು ಪತ್ತೆಯಾಗಿದ್ದು ಆರೋಪಿ ಗೋಪಾಲ ಪೂಜಾರಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹೊಸಂಗಡಿಗ್ರಾಮದ ಚಂದ್ರಕಾಂತ್ ಎಂಬಾತನಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯ ಹಿನ್ನಲೆಯಲ್ಲಿ ವೇಣೂರು ಪೊಲೀಸರು ದಾಳಿ ನಡೆಸಿದಾಗ ಮಾರಾಟ ಮಾಡಲು ಶೇಖರಿಸಿಟ್ಟಿರು ಮದ್ಯದ ಪ್ಯಾಕೆಟ್ ಗಳು ಕಂಡು ಬಂದಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
