Home ಸ್ಥಳೀಯ ಸಮಾಚಾರ ಬಂದಾರು ವಾಂತಿಭೇದಿ ಪ್ರಕರಣಆರೋಗ್ಯ ಇಲಾಖೆಯ‌ ಅಧಿಕಾರಿಗಳಿಂದ ಪರಿಶೀಲನೆ

ಬಂದಾರು ವಾಂತಿಭೇದಿ ಪ್ರಕರಣಆರೋಗ್ಯ ಇಲಾಖೆಯ‌ ಅಧಿಕಾರಿಗಳಿಂದ ಪರಿಶೀಲನೆ

30
0

ಬೆಳ್ತಂಗಡಿ; ಬಂದಾರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಮಹಿಳೆಯೊಬ್ಬರು ಮೃತಪಟ್ಟು ಹಲವರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದ ತಂಡ ಶನಿವಾರ ಪರಿಸರದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಪಂಚಾಯತಿನಲ್ಲಿ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.
ಬಂದಾರು ಸಹಿತ ಸಮೀಪದ ಮೊಗ್ರು ಇಳಂತಿಲದಲ್ಲೂ ಹಲವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ಬಂದಾರಿನ ಮನೆಯೊಂದರಲ್ಲಿ ಆರತಕ್ಷತೆ ಸಮಾರಂಭದ ಭೋಜನ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಬಳಿಕ ಆರತಕ್ಷತೆಯಲ್ಲಿ ಭಾಗವಹಿಸದ ಮಂದಿಯಲ್ಲೂ ಈ ಲಕ್ಷಣಗಳು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಇದುವರೆಗೆ 3 ಗ್ರಾಮಗಳಲ್ಲಿ ಸುಮಾರು 27 ಮಂದಿ ಹೆಚ್ಚಿನ ರೀತಿಯಲ್ಲಿ ಅಸ್ವಸ್ಥರಾಗಿದ್ದಾರೆ. ಹಾಗೂ ಅನೇಕರು ಹೊರರೋಗಿಗಳಾಗಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಖರ ಕಾರಣ ತಿಳಿಯುವ ಅಗತ್ಯವಿದ್ದು ಇದಕ್ಕಾಗಿ 40 ಜನ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ತಂಡ ಒಂದು ವಾರಗಳ ಕಾಲ ಪರಿಸರದ 700 ರಷ್ಟು ಮನೆಗಳಲ್ಲಿ ಪರಿಶೀಲನೆ ನಡೆಸುವಂತೆ ಡಿಎಚ್ ಒ ಸೂಚಿಸಿದ್ದಾರೆ.
ಇದೀಗ ಸಾಂಕ್ರಾಮಿಕ‌ ರೋಗದಂತೆ ಹರಡುತ್ತಿದೆ. ಪರಿಸರದ ಬಾವಿ,ಬೋರ್ ವೆಲ್, ಕೆರೆಗಳು ಕಲುಷಿತಗೊಂಡಿದ್ದು ಅದರ ನೀರಿನ ಉಪಯೋಗದಿಂದ ಬಂದಿರುವ ಸಾಧ್ಯತೆ ಇದ್ದು ಅಲ್ಲಿನ ಜಲಮೂಲಗಳ ನೀರಿನ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ. ಇದು ಪಂಚಾಯಿತಿ ನಳ್ಳಿ ನೀರಿನಿಂದ ಉಂಟಾಗಿರುವ ತೊಂದರೆ ಆಗಿರುವುದಿಲ್ಲ ಎಂದು ತಿಳಿಸಿರುವ ಡಿಎಚ್ ಒ ಸ್ಥಳೀಯ ಜನರಿಗೆ ಪಂಚಾಯಿತಿ ಮೂಲಕ ಮುಂದಿನ ಕೆಲವು ದಿನಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ.
ಈ ಪ್ರಕರಣದಿಂದ ಸಾವನ್ನಪ್ಪಿರುವ ಬಂದಾರಿನ ಕಮಲಾ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೀರಿನಿಂದ‌‌ ಇದು ಹರಡುತ್ತಿದೆ ಎಂದು ಹೇಳಾಗುತ್ತಿದೆ ಆದರೆ ಸ್ಥಳೀಯವಾಗಿ ಎಲ್ಲರ ಮನೆಯಲ್ಲಿಯೂ ಏಕ ಕಾಲದಲ್ಲಿ ಇದು ಹೇಗೆ ಆಗಿದೆ ಎಂಬುದು ಪ್ರಶ್ನೆಯಾಗಿದೆ. ಮನೆಯೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ಆಹಾರ ಸೇವಿಸಿದವರಿಗೆ ಈರೀತಿ ಸಮಸ್ಯೆ ಆರಂಭದಲ್ಲಿ ಕಾಣಿಸಿಕೊಂಡಿದೆ. ಆದರೆ ಅದು ಕಾರ್ಯಕ್ರಮ ನಡೆದು ಕೆಲವು ದಿನಗಳ ಬಳಿಕವೂ ಹಲವರಲ್ಲಿ ರೋಗಗಳು ಕಾಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

-ಪಂಚಾಯಿತಿಯಲ್ಲಿ ಸಭೆ-
ಪ್ರಕರಣದ ಕುರಿತು ಪಂಚಾಯಿತಿಯಲ್ಲಿ ಸಭೆ ನಡೆದಿದ್ದು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಡಿಎಚ್ ಒ ಡಾ. ತಿಮ್ಮಯ್ಯ ಎಚ್.ಆರ್. , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.
ನವೀನ್ ಚಂದ್ರ, ಸಾಂಕ್ರಾಮಿಕ ರೋಗ ತಜ್ಞೆ ಡಾ. ಶಿಲ್ಪಾ, ಸೂಕ್ಷ್ಮಾಣು ಜೀವಿ ತಜ್ಞೆ ವೀಣಾ ವಿಜಯರಾಜ್,
ಟಿ ಎಚ್ ಒ ಡಾ. ಸಂಜಾತ್, ಸ್ಥಳೀಯ ವೈದ್ಯಾಧಿಕಾರಿ ಸುನಿಲ್ ಕುಮಾರ್,ಹಿರಿಯ ಆರೋಗ್ಯ ನಿರೀಕ್ಷಕರಾದ ಗುರುರಾಜ ಉಮಚಗಿ, ಸೋಮನಾಥ್, ಸಮುದಾಯ ಆರೋಗ್ಯ ಅಧಿಕಾರಿ ಲೀಲಾವತಿ, ತಾಲೂಕು ಆರೋಗ್ಯ ಪರೀಕ್ಷಾಧಿಕಾರಿ ಸುನೀತಾ ಹೆಗ್ಡೆ, ಪಂಚಾಯಿತಿ ಅಧ್ಯಕ್ಷ ದಿನೇಶ್ ಖಂಡಿಗ, ಪಿಡಿಒ ಪುರುಷೋತ್ತಮ ಜಿ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here